Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ಸಮಾಧಿಗೆ ಭೇಟಿ ಕೊಟ್ಟು ಓವರ್ ಆಕ್ಟಿಂಗ್ ಮಾಡ್ಬೇಡಿ: ಜಾನಿ ಮಾಸ್ಟರ್ ಟ್ರೋಲ್

Jani Master

Krishnaveni K

ಬೆಂಗಳೂರು , ಬುಧವಾರ, 29 ಜನವರಿ 2025 (11:36 IST)
Photo Credit: X
ಬೆಂಗಳೂರು: ಲೈಂಗಿಕ ಕಿರುಕುಳದಲ್ಲಿ ಬಂಧಿತರಾಗಿ ಇದೀಗ ಜಾಮೀನು ಪಡೆದು ಹೊರಬಂದಿರುವ ಕೊರಿಯಾಗ್ರಫರ್ ಜಾನಿ ಮಾಸ್ಟರ್ ಪವರ್ ಸ್ಟಾರ್ ಡಾ ಪುನೀತ್ ರಾಜ್ ಕುಮಾರ್ ಸಮಾಧಿಗೆ ಭೇಟಿ ಕೊಟ್ಟು ಟ್ರೋಲ್ ಗೊಳಗಾಗಿದ್ದಾರೆ.

ಡಾ ಪುನೀತ್ ರಾಜ್ ಕುಮಾರ್ ಸಮಾಧಿಗೆ ಭೇಟಿ ಕೊಟ್ಟ ಕೊರಿಯಾಗ್ರಫರ್ ಜಾನಿ ಮಾಸ್ಟರ್ ಕೆಲವು ಹೊತ್ತು ಸಮಾಧಿ ಮುಂದೆ ಕೂತು ಪ್ರಾರ್ಥನೆ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಬೆಂಗಳೂರಿನಲ್ಲಿ ಹೊಸ ಕೆಲಸಕ್ಕೆ ಮುನ್ನ ನಿಮ್ಮ ಆಶೀರ್ವಾದವಿರಲಿ ಎಂದು ನಮಿಸಿದ್ದಾರೆ.

ಈ ಫೋಟೋ ಹಂಚಿಕೊಂಡ ಜಾನಿ ಮಾಸ್ಟರ್ ಗೆ ನೆಟ್ಟಿಗರು ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಅಂತೂ ಮತ್ತೊಂದು ನಾಟಕ ಶುರು ಮಾಡಿದ್ದೀರಿ ಎಂದಿದ್ದಾರೆ. ಡ್ಯಾನ್ಸ್ ಗಿಂತ ಆಕ್ಟಿಂಗ್ ಮಾಡೋದನ್ನು ಕಲಿತುಕೊಂಡಂತಿದೆ ಎಂದಿದ್ದಾರೆ.

ಜಾನಿ ಮಾಸ್ಟರ್ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ, ಹಲ್ಲೆ ನಡೆಸಿದ ಆರೋಪಕ್ಕೊಳಗಾಗಿದ್ದರು. ತೆಲುಗು ಮೂಲದ ಕೊರಿಯಾಗ್ರಫರ್ ಜಾನಿ ಮಾಸ್ಟರ್ ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಯಾಗಿ ಈಗ ಮತ್ತೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಬಾರಿ ಹಸೆಮಣೆ ಏರಲು ಸಜ್ಜಾದ ರಾಖಿ ಸಾವಂತ್‌, ಹುಡುಗನ ಹಿಸ್ಟರಿ ಕೇಳಿದ್ರೆ ಶಾಕ್ ಆಗ್ತೀರಾ