Select Your Language

Notifications

webdunia
webdunia
webdunia
webdunia

ನಟ ಪೋಸಾನಿ ಕೃಷ್ಣ ಬಂಧನಕ್ಕೆ ಜಗನ್‌ಮೋಹನ್ ರೆಡ್ಡಿ ಆಕ್ರೋಶ, ಪತ್ನಿಗೆ ಕರೆ ಮಾಡಿ ಸಂತೈಸಿದ ಮಾಜಿ ಸಿಎಂ

ನಟ ಪೋಸಾನಿ ಕೃಷ್ಣ ಬಂಧನಕ್ಕೆ ಜಗನ್‌ಮೋಹನ್ ರೆಡ್ಡಿ ಆಕ್ರೋಶ, ಪತ್ನಿಗೆ ಕರೆ ಮಾಡಿ ಸಂತೈಸಿದ ಮಾಜಿ ಸಿಎಂ

Sampriya

ಆಂಧ್ರಪ್ರದೇಶ , ಗುರುವಾರ, 27 ಫೆಬ್ರವರಿ 2025 (17:32 IST)
Photo Courtesy X
ಆಂಧ್ರಪ್ರದೇಶ: ಹಿರಿಯ ತೆಲುಗು ನಟ ಮತ್ತು ಪಕ್ಷದ ಸದಸ್ಯ ಪೋಸಾನಿ ಕೃಷ್ಣ ಮುರಳಿ ಬಂಧನವನ್ನು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಅಧ್ಯಕ್ಷ ವೈಎಸ್ ಜಗನ್‌ ಮೋಹನ್ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.

ಫೆ.26ರಂದು ರಾತ್ರಿ 8.45ರ ಸುಮಾರಿಗೆ ಮುರಳಿಯನ್ನು ಆಂಧ್ರಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಓಬುಲವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆಧರಿಸಿ ಆತನನ್ನು ಬಂಧಿಸಲಾಗಿದೆ. ಡಿಸಿಎಂ ಪವನ್ ಕಲ್ಯಾಣ್ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ ಸಂಬಂಧ ಪೋಸಾನಿ ಅವರನ್ನು ಬಂಧಿಸಲಾಗಿದೆ.

ಬಂಧನದ ನಂತರ, ವೈಎಸ್ ಜಗನ್‌ಮೋಹನ್ ರೆಡ್ಡಿ ಅವರು ಮುರಳಿ ಅವರ ಪತ್ನಿ ಕುಸುಮಲತಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ನಿಮ್ಮ ಜತೆಗೆ ನಾವಿದ್ದೇವೆ. ವೈಎಸ್‌ಆರ್‌ಸಿಪಿಯಿಂದ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದರು. ಸಮ್ಮಿಶ್ರ ಸರ್ಕಾರ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಸ್ತುತ ಪರಿಸ್ಥಿತಿಯನ್ನು ಸಾರ್ವಜನಿಕರು ಮತ್ತು ದೈವಿಕ ಶಕ್ತಿಗಳು ಗಮನಿಸುತ್ತಿವೆ ಎಂದು ಹೇಳಿದರು.

ವೈಎಸ್‌ಆರ್‌ಸಿಪಿ ಕಾನೂನು ಮತ್ತು ರಾಜಕೀಯವಾಗಿ ಮುರಳಿ ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ರೆಡ್ಡಿ ಒತ್ತಿ ಹೇಳಿದರು. ಪ್ರಕರಣವನ್ನು ನಿಭಾಯಿಸಲು ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಈಗಾಗಲೇ ಹಿರಿಯ ವಕೀಲರನ್ನು ತೊಡಗಿಸಿಕೊಂಡಿದೆ ಎಂದು ಅವರು ಖಚಿತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

44 ದಿನಗಳಲ್ಲಿ 66ಕೋಟಿಗೂ ಹೆಚ್ಚು ಭಕ್ತರಿಂದ ತ್ರಿವೇಣಿಯಲ್ಲಿ ಪವಿತ್ರ ಸ್ನಾನ: ಯೋಗಿ ಆದಿತ್ಯನಾಥ್‌