Select Your Language

Notifications

webdunia
webdunia
webdunia
webdunia

ಎಟಿಎಂನಲ್ಲಿ ಬೆಂಕಿ ಅವಘಡ: ನೋಡ ನೋಡುತ್ತಿದ್ದ ಹಾಗೇ ಲಕ್ಷಾಂತರ ರೂಪಾಯಿ ಬೆಂಕಿಗಾಹುತಿ

ಎಟಿಎಂನಲ್ಲಿ ಬೆಂಕಿ ಅವಘಡ: ನೋಡ ನೋಡುತ್ತಿದ್ದ ಹಾಗೇ ಲಕ್ಷಾಂತರ ರೂಪಾಯಿ ಬೆಂಕಿಗಾಹುತಿ

Sampriya

ಹೊಸಕೋಟೆ , ಶುಕ್ರವಾರ, 28 ಫೆಬ್ರವರಿ 2025 (11:45 IST)
Photo Courtesy X
ಹೊಸಕೋಟೆ: ಎಸ್ ಬಿಐ ಎಟಿಎಂನಲ್ಲಿ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಹಣ ಬೆಂಕಿಗಾಹುತಿಯಾದ ಘಟನೆ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಎಟಿಎಂ ಇರುವ ಕಟ್ಟಡ ನೋಡ ನೋಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಹೊಸಕೋಟೆಯ ಕಾಲೇಜ್ ರಸ್ತೆಯ ಫರ್ವಾಜ್ ಪ್ಲಾಜಾದ ಬಳಿ ಇರುವ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಎಟಿಎಂ ನಲ್ಲಿ 16 ಲಕ್ಷ ಹಣ ಇತ್ತು ಎಂದು ಹೇಳಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ.

ರಸ್ತೆಬಳಿಯೇ ಇದ್ದಕ್ಕಿದ್ದಂತೆ ಎಟಿಎಂ ಹೊತ್ತಿ ಉರಿದ ಪರಿಣಾಮ ಸಾವಿರಾರು ಜನರು ಸೇರಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ ಬೆನ್ನಲ್ಲೇ ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ