Select Your Language

Notifications

webdunia
webdunia
webdunia
webdunia

ನಾಯಕ ನಾನೇ ಎಂದ ಡಿಕೆ ಶಿವಕುಮಾರ್ ಬಗ್ಗೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು

MB Patil

Krishnaveni K

ಬೆಂಗಳೂರು , ಗುರುವಾರ, 27 ಫೆಬ್ರವರಿ 2025 (17:17 IST)
ಬೆಂಗಳೂರು: ನಾನು ನಾಯಕ, ನನಗೆ ವೈಬ್ರೇಷನ್ ಇದೆ ಎಂದೆಲ್ಲಾ ಹೇಳಿರುವ ಡಿಕೆ ಶಿವಕುಮಾರ್ ಬಗ್ಗೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

2028 ರ ಚುನಾವಣೆಗೆ ನನ್ನದೇ ನಾಯಕತ್ವ, ನನಗೂ  ವೈಬ್ರೇಷನ್ ಇದೆ ಎಂದು ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ವಿಚಾರ ಈಗ ರಾಜ್ಯ ಕಾಂಗ್ರೆಸ್ ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹೇಳಿಕೆ ಕೆಲವರ ಕಣ್ಣು ಕೆಂಪಗಾಗಿಸಿದೆ.

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಬಿ ಪಾಟೀಲ್ ಈ ಬಗ್ಗೆ ನನ್ನದು ನೋ ಕಾಮೆಂಟ್ಸ್. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಬೆಲೆಯಿದೆ. ಸಾಮಾನ್ಯ ಕಾರ್ಯಕರ್ಯರಿಗೂ ಬೆಲೆಯಿದೆ. ನಮ್ಮದು ಹೈಕಮಾಂಡ್ ಪಕ್ಷ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಕೂಡಾ ನಮ್ಮ ನಾಯಕರೇ. ಜನ ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರ ನಾಯಕತ್ವ ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಮತ ಹಾಕಿದ್ದಾರೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಚುನಾವಣೆಗೆ ಹೋಗುತ್ತೇವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲಂಗಾಣದ ಬೆನ್ನಲ್ಲೇ ರಾಯಚೂರಿನಲ್ಲೂ ಪಕ್ಷಿಗಳ ಸಾವು: ಆತಂಕದಲ್ಲಿ ಕುಕ್ಕುಟೋದ್ಯಮ