Select Your Language

Notifications

webdunia
webdunia
webdunia
webdunia

ತೆಲಂಗಾಣದ ಬೆನ್ನಲ್ಲೇ ರಾಯಚೂರಿನಲ್ಲೂ ಪಕ್ಷಿಗಳ ಸಾವು: ಆತಂಕದಲ್ಲಿ ಕುಕ್ಕುಟೋದ್ಯಮ

Bird fever in Telangana

Sampriya

ರಾಯಚೂರು , ಗುರುವಾರ, 27 ಫೆಬ್ರವರಿ 2025 (15:48 IST)
Photo Courtesy X
ರಾಯಚೂರು: ತೆಲಂಗಾಣದ ಬೆನ್ನಲ್ಲೆ ಕರ್ನಾಟಕದ ರಾಯಚೂರಿನಲ್ಲಿ ಪಕ್ಷಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಹಕ್ಕಿ ಜ್ವರ ಹರಡಿರುವ ಶಂಕೆ ವ್ಯಕ್ತವಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹಕ್ಕಿ ಜ್ವರ ಪತ್ತೆಯಾಗಿತ್ತು.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಪ್ರತೀ ದಿನ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್‌ ಫಿಶರ್‌, ಸುವರ್ಣಪಕ್ಷಿ ಸೇರಿದಂತೆ ವಿವಿಧ ಜಾತಿಯ ವಲಸೆ ಪಕ್ಷಿಗಳು ಸಾವನ್ನಪ್ಪುತ್ತಿದೆ. ಹೀಗಾಗಿ ಕುಕ್ಕುಟೋದ್ಯಮವನ್ನು ನಂಬಿರುವ ನೂರಾರು ಮಂದಿ ಆತಂಕಗೊಂಡಿದ್ದಾರೆ.

ಐದಾರು ದಿನಗಳಿಂದಲೂ ಮಾನ್ವಿ ಪಟ್ಟಣ, ರಬಣಕಲ್‌ ಸೇರಿದಂತೆ ಹಲವೆಡೆ ಪಕ್ಷಗಳು ಇದ್ದಕ್ಕಿದ್ದಂತೆ ಮರದ ಮೇಲಿಂದ ಬಿದ್ದು, ಸಾವನ್ನಪ್ಪುತ್ತಿವೆ. ಇದು ಹಕ್ಕಿ ಜ್ವರ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಯಚೂರಿನ ಮಕ್ಸೂದ್ ಅಲಿ ಎಂಬುವವರ ತೋಟದಲ್ಲಿ ಪ್ರತಿದಿನ 8-10 ಪಕ್ಷಿಗಳು ಸಾವನ್ನಪ್ಪುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮಾನ್ವಿ ಪಟ್ಟಣ, ರಬಣಕಲ್ ಸೇರಿ ಹಲವೆಡೆ ಪಕ್ಷಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಸಾಯುತ್ತಿವೆ.  

ಮರದಿಂದ ಬಿದ್ದು ಅಸ್ವಸ್ಥಗೊಂಡ ಪಕ್ಷಿಗಳಿಗೆ ಪಶುವೈದ್ಯಾಧಿಕಾರಿಗಳು ಚುಚ್ಚುಮದ್ದು ನೀಡಿದ್ದಾರೆ. ಮೃತ ಪಕ್ಷಿಗಳ ಕಳೆಬರವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗೋದಲ್ಲಿ ಅಳುವ ರೋಗಕ್ಕೆ 50ಕ್ಕೂ ಅಧಿಕ ಮಂದಿ ಬಲಿ: ವೈದ್ಯ ಲೋಕಕ್ಕೆ ಸವಾಲಾದ ನಿಗೂಢ ಕಾಯಿಲೆ