Select Your Language

Notifications

webdunia
webdunia
webdunia
webdunia

ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಡಿಕೆ ಶಿವಕುಮಾರ್‌, ರಾಜ್ಯದ ಬಗ್ಗೆ ವಿಶೇಷ ಮನವಿ

DCM DK Shivkumar, Karnataka Congress Government, Union Jal Shakti Minister CR Paatil,

Sampriya

ನವದೆಹಲಿ , ಬುಧವಾರ, 26 ಫೆಬ್ರವರಿ 2025 (16:24 IST)
Photo Courtesy X
ನವದೆಹಲಿ: ಕೇಂದ್ರ ಜಲಶಕ್ತಿ ಸಚಿವ ಸಿಆರ್‌ ಪಾಟೀಲ್ ಅವರನ್ನು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿಯಾಗಿ ರಾಜ್ಯದ 6 ಹೊಸ ನೀರಾವರಿ ಯೋಜನೆಗಳಿಗೆ ಅನುಮೋದನೆ ಮತ್ತು ಹಣಕಾಸಿನ ನೆರವು ನೀಡುವಂತೆ ಮಾತುಕತೆ ನಡೆಸಿದರು.

ಈ ವೇಳೆ ಅವರು ಈಗಾಗಲೇ ಅಸ್ತಿತ್ವದಲ್ಲಿರುವ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ಮತ್ತು ಹಣ ಬಿಡುಗಡೆಗೂ ಮನವಿ ಮಾಡಿದರು.

ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 11,123 ಕೋಟಿ ರೂ.ಗಳ ಅಂದಾಜು ವೆಚ್ಚದ ಆರು ಹೊಸ ನೀರಾವರಿ ಯೋಜನೆಗಳಿಗೆ ಅನುದಾನ ಕೋರಿದ್ದಾರೆ.

ಈ ಯೋಜನೆಯಲ್ಲಿ ಏನೆಲ್ಲ ಇದೆ:  ಪ್ರವಾಹ ನಿರ್ವಹಣೆ ಮತ್ತು ಬೆಣ್ಣೆಹಳ್ಳದಲ್ಲಿ ಗಡಿ ಪ್ರದೇಶದ ಕಾರ್ಯಕ್ರಮ; ಭೀಮಾ ನದಿಗೆ ಅಡ್ಡಲಾಗಿ ಸೋಂತಿ ಏತ ನೀರಾವರಿ ಯೋಜನೆಯಡಿ 16,000 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು, ಮಲಪ್ರಭಾ ಕಾಲುವೆ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣ (ERM), ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಇಂಡಿ ಶಾಖಾ ಕಾಲುವೆ, ಘಟಪ್ರಭಾ ಬಲದಂಡೆ ಕಾಲುವೆ, ಚಿಕ್ಕೋಡಿ ಶಾಖಾ ಕಾಲುವೆ ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ಕಾಮಗಾರಿ ಸೇರಿವೆ.

ಇದರಿಂದ ರಾಜ್ಯದ ವಿಜಯಪುರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಂಭಮೇಳದ ಆಯೋಜನೆ ಹೊಗಳಿದ ಡಿಕೆ ಶಿವಕುಮಾರ್