Select Your Language

Notifications

webdunia
webdunia
webdunia
webdunia

'ನಮ್ಮ ರಸ್ತೆ, ನಮ್ಮ ಹೆಮ್ಮೆ' ಕಾರ್ಯಕ್ರಮದಲ್ಲಿ ಕನ್ನಡ ಮಾಯ, ಹೀಗೇ ಆದ್ರೆ ಕರುನಾಡಲ್ಲಿ ಕನ್ನಡ ಮಾಯ ಗ್ಯಾರಂಟಿ

Karnataka Congress Government, Namma Raste, Namma Hemme Program, Opposition Leader R Ashok,

Sampriya

ಬೆಂಗಳೂರು , ಗುರುವಾರ, 20 ಫೆಬ್ರವರಿ 2025 (15:41 IST)
ಬೆಂಗಳೂರು: ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತಿಗೆ ಕೊಳ್ಳಿಯಿಟ್ಟಿದ್ದು, ಕನ್ನಡದ ಕಗ್ಗೂಲೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಗಾಜಿನ ಮನೆಯಲ್ಲಿ ನಡೆಯುತ್ತಿರುವ 'ನಮ್ಮ ರಸ್ತೆ, ನಮ್ಮ ಹೆಮ್ಮೆ' ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿರುವ ಬಗ್ಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‌  

ಕಾಂಗ್ರೆಸ್ ಸರ್ಕಾರದಿಂದ ಕನ್ನಡದ ಕಗ್ಗೂಲೆ, ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತಿಗೆ ಕೊಳ್ಳಿ ಇಟ್ಟಿದೆ.

ಕೆ.ಪಿ.ಎ.ಸ್ಸಿ ಪ್ರಶ್ನೆ ಪತ್ರಿಗಳಲ್ಲಿ ಪದೇ ಪದೆ ಕನ್ನಡ ವ್ಯಾಕರಣ ತಪ್ಪಾಗಿ ಮುದ್ರಿಸಿ ಕನ್ನಡದ ಕಗ್ಗೊಲೆ ಮಾಡಿದ್ದಾಯ್ತು, ಕನ್ನಡ ಶಾಲೆಗಳನ್ನು ಮುಚ್ಚಿಸಿ ಕನ್ನಡ ಕಲಿಕೆಗೆ ಎಳ್ಳು ನೀರು ಬಿಟ್ಟಿದ್ದಾಯ್ತು, ಈಗ  ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಗಾಜಿನ ಮನೆಯಲ್ಲಿ ನಡೆಯುತ್ತಿರುವ 'ನಮ್ಮ ರಸ್ತೆ, ನಮ್ಮ ಹೆಮ್ಮೆ' ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿದೆ.

ಹೀಗೆ ಮುಂದುವರೆದರೆ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಕರುನಾಡಲ್ಲಿ ಕನ್ನಡವನ್ನ ಶಾಶ್ವತವಾಗಿ ಅಳಿಸಿ ಹಾಕುವುದು ಮಾತ್ರ ಗ್ಯಾರೆಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೆದ್ದರೆ ರಾಹುಲ್ ಕಾರಣ, ಸೋತರೆ ಸಾಮಾನ್ಯ ನಾಯಕರಾ: ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಟಾಂಗ್