Select Your Language

Notifications

webdunia
webdunia
webdunia
Wednesday, 9 April 2025
webdunia

ಕೇರಳದಲ್ಲಿ ಇಂದು ಚುನಾವಣೆ: ಮಂಜೇಶ್ವರ ಮೇಲೆ ಬಿಜೆಪಿ ವಿಶ್ವಾಸ

ಕೇರಳ ಚುನಾವಣೆ
ತಿರುವನಂತಪುರಂ , ಮಂಗಳವಾರ, 6 ಏಪ್ರಿಲ್ 2021 (06:56 IST)
ತಿರುವನಂತಪುರಂ: ಕೇರಳದಲ್ಲಿ ಇಂದು ವಿಧಾನಸಭೆ ಚುನಾವಣೆಗೆ ಒಂದೇ ದಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಬಗ್ಗೆ ಜನರಲ್ಲಿ ಭಾರೀ ಕುತೂಹಲವಿದೆ.


ಪ್ರತೀ ಬಾರಿಯೂ ಕೇರಳದಲ್ಲಿ ಯುಡಿಎಫ್ ಮತ್ತು ಎಲ್ ಡಿಎಫ್ ಒಂದಾದ ಮೇಲೊಂದರಂತೆ ಆಡಳಿತ ನಡೆಸಿವೆ. ಆದರೆ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಸ್ಪಷ್ಟ ಬಹುಮತ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಅತ್ತ ಬಿಜೆಪಿಗೆ ಕನ್ನಡಗಿರು ಹೆಚ್ಚಾಗಿರುವ ಮಂಜೇಶ್ವರ ಕ್ಷೇತ್ರದ ಮೇಲೆ ಕಣ್ಣಿದೆ. ಇಲ್ಲಿ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಕಣಕ್ಕಿಳಿದಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕಳೆದ ಬಾರಿ ಇಲ್ಲಿ ಬಿಜೆಪಿಗೆ ಎರಡನೇ ಸ್ಥಾನ ಸಿಕ್ಕಿತ್ತು. ಆದರೆ ಈ ಬಾರಿ ಗೆಲ್ಲುವ ವಿಶ್ವಾಸ ಬಿಜೆಪಿ ಕಾರ್ಯಕರ್ತರಲ್ಲಿದೆ. ಆದರೆ  ಕೊರೋನಾದಿಂದಾಗಿ ಕರ್ನಾಟಕದಲ್ಲಿ ನೆಲೆಸಿರುವ ಅನೇಕ ಗಡಿನಾಡಿಗರ ಮತಗಳು ಬಿಜೆಪಿಗೆ ನಷ್ಟವಾಗಬಹುದು. ಆದರೂ ಇಲ್ಲಿ ಬಿಜೆಪಿ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಕಸದ ತೊಟ್ಟಿ ಆಗಿದ್ದಾರೆ ಎಂದ ಸಚಿವ