Publish Date: Fri, 02 Apr 2021 (09:16 IST)
Updated Date: Fri, 02 Apr 2021 (09:18 IST)
ಬೆಂಗಳೂರು: ಸಾರ್ವಜನಿಕವಾಗಿ ಹೇಳಿಕೆ ಕೊಡುವಾಗ ಎಷ್ಟು ಎಚ್ಚರಿಕೆಯಿಂದಿರಬೇಕು ಎಂಬ ಮಾತಿದೆ. ಆದರೆ ಜಗ್ಗೇಶ್ ಈ ವಿಚಾರದಲ್ಲಿ ಆಗಾಗ ಜಾರಿ ಬೀಳುತ್ತಿರುವುದು ವಿಪರ್ಯಾಸ.
ಈ ಹಿಂದೆಯೂ ಹಲವು ಬಾರಿ ಜಗ್ಗೇಶ್ ಇದೇ ರೀತಿ ವಿವಾದಕ್ಕೀಡಾಗಿದ್ದರು. ಇದಕ್ಕೂ ಮೊದಲು ದರ್ಶನ್, ಉಪೇಂದ್ರ ಬಗ್ಗೆ ನೀಡಿದ್ದ ಹೇಳಿಕೆಗಳೂ ವಿವಾದಕ್ಕೀಡಾಗಿತ್ತು. ಅದಕ್ಕೂ ಮೊದಲು ಹಿಂದೊಮ್ಮೆ ರೆಬಲ್ ಸ್ಟಾರ್ ಅಂಬರೀಶ್ ಬಗ್ಗೆಯೂ ನೀಡಿದ ಹೇಳಿಕೆಯಿಂದ ಭಾರೀ ವಿವಾದಕ್ಕೀಡಾಗಿದ್ದರು.
ವಿವಾದಿತ ಮಾತುಗಳೂ, ಜಗ್ಗೇಶ್ ಗೂ ಬಿಡಿಸಲಾರದ ನಂಟಾಗಿದೆ. ವಿಪರ್ಯಾಸವೆಂದರೆ ದರ್ಶನ್ ವಿವಾದದ ಬಳಿಕ ಇನ್ನು ಮುಂದೆ ಯಾರ ಬಗ್ಗೆಯೂ ಮಾತನಾಡಲ್ಲ ಎಂದು ಹೇಳಿಯೂ ಮತ್ತೆ ಇನ್ನೇನೋ ಹೇಳಿ ವಿವಾದಕ್ಕೆ ಸಿಲುಕಿದ್ದಾರೆ. ಇದು ಸಚಿವ ಬಿಸಿ ಪಾಟೀಲ್ ಜೊತೆ ಕಿತ್ತಾಟ ನಡೆದಿದೆ. ಯಾರನ್ನೂ ನೋಯಿಸುವ ಉದ್ದೇಶವಿಲ್ಲದೇ ಇರಬಹುದು. ಆದರೆ ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಹೇಳಿಕೆ ನೀಡುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗುತ್ತದೆ.