Publish Date: Mon, 05 Apr 2021 (09:09 IST)
Updated Date: Mon, 05 Apr 2021 (09:11 IST)
ನವದೆಹಲಿ: ಛತ್ತೀಸ್ ಘಡದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳ ಪ್ರಾಣ ತ್ಯಾಗ ವ್ಯರ್ಥವಾಗಲು ಬಿಡಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಕ್ಸಲ್ ದಾಳಿಯಲ್ಲಿ ಸುಮಾರು 22 ಮಂದಿ ಭದ್ರತಾ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ನಕ್ಸಲರ ಈ ಹೇಯ ಕೃತ್ಯಕ್ಕೆ ತಕ್ಕ ತಿರುಗೇಟು ಕೊಡದೇ ಬಿಡಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ನಕ್ಸಲ್ ದಾಳಿಯ ಸುದ್ದಿ ತಿಳಿದ ತಕ್ಷಣ ಚುನಾವಣಾ ಕ್ಯಾಂಪೇನ್ ರದ್ದುಗೊಳಿಸಿದ ದೆಹಲಿಗೆ ಮರಳಿದ ಅಮಿತ್ ಶಾ ಘಟನೆಯ ವಿವರ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಅವರು ಎರಡೂ ಕಡೆ ಪ್ರಾಣ ಹೋಗಿದೆ. ನಮ್ಮ ಸೈನಿಕರ ಸಾವಿಗೆ ಪ್ರತೀಕಾರ ತೀರಿಸದೇ ಬಿಡಲ್ಲ ಎಂದು ಅವರ ಕುಟುಂಬಸ್ಥರಿಗೆ ಭರವಸೆ ಕೊಡುತ್ತೇನೆ ಎಂದಿದ್ದಾರೆ.