ತಿರುವನಂತಪುರಂ: ಕೇರಳದಲ್ಲಿ ಈಗ ನಾಡಹಬ್ಬ ಓಣಂ ಸಂಭ್ರಮ. ಕೊರೋನಾದಿಂದಾಗಿ ಬೇಸರಗೊಂಡಿದ್ದ ಕೇರಳೀಯರಿಗೆ ಖುಷಿ ತಂದುಕೊಟ್ಟಿರುವ ಹಬ್ಬ.
ಭರ್ಜರಿ ಹಬ್ಬಕ್ಕೆ ಕೊರೋನಾ ಬ್ರೇಕ್ ಹಾಕಿದ್ದರೂ ಸಾಂಪ್ರದಾಯಿಕವಾಗಿ ತಮ್ಮ ಮನೆಗಳಲ್ಲೇ ಕೇರಳೀಯರು ಓಣಂ ಬರಮಾಡಿಕಂಡಿದ್ದಾರೆ. 10 ದಿನಗಳ ಕಾಲ ನಡೆಯುವ ಓಣಂ ಹಬ್ಬದ ಸಂದರ್ಭದಲ್ಲಿ ಮಹಾಬಲಿ ಮತ್ತು ವಾಮನ ಮತ್ತೆ ಭೂಮಿಗೆ ಬರುತ್ತಾರೆ ಎಂಬುದು ನಂಬಿಕೆ.
ಓಣಂ ಹಬ್ಬದಲ್ಲಿ ಕೇರಳೀಯರಿಗೆ ಪೂಕಳಂ (ಹೂವಿನ ರಂಗೋಲಿ) ಹಾಕಿ ಸಾಂಪ್ರದಾಯಿಕ ಉಡುಗೆ ತೊಟ್ಟು ವಿವಿಧ ಬಗೆಯ ಭಕ್ಷ್ಯ ಭೋಜನ ತಯಾರಿಸಿ ಉಣಬಡಿಸುವುದೇ ವಿಶೇಷ. ಇದು ವಿಶ್ವದಾದ್ಯಂತ ಇರುವ ಕೇರಳೀಯರಿಗೆ ಕೇವಲ ಹಬ್ಬ ಮಾತ್ರವಲ್ಲ, ಒಂದು ಭಾವನಾತ್ಮಕ ವಿಚಾರವೂ ಹೌದು. ಕೇರಳದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಈ ಹಬ್ಬ ಕೊರೋನಾ ನಡುವೆ ಜನತೆಗೆ ನೆಮ್ಮದಿ, ಸಂತೋಷ ನೀಡಲಿ ಎಂದು ಹಾರೈಸೋಣ.