Select Your Language

Notifications

webdunia
webdunia
webdunia
webdunia

ಸ್ವತಂತ್ರ ದಿನಕ್ಕೆ ಪ್ಲಾಸ್ಟಿಕ್ ಧ್ವಜ, ಧ್ವಜದ ಬಣ್ಣದ ಮಾಸ್ಕ ಬಳಸಬೇಡಿ!

ಸ್ವತಂತ್ರ ದಿನಕ್ಕೆ ಪ್ಲಾಸ್ಟಿಕ್ ಧ್ವಜ, ಧ್ವಜದ ಬಣ್ಣದ ಮಾಸ್ಕ ಬಳಸಬೇಡಿ!
ನವದೆಹಲಿ , ಮಂಗಳವಾರ, 10 ಆಗಸ್ಟ್ 2021 (12:40 IST)
ನವದೆಹಲಿ: ಇನ್ನೇನು ಸ್ವಾತಂತ್ರ್ಯ ದಿನಾಚರಣೆಗೆ ನಾಲ್ಕೇ ದಿನ ಬಾಕಿಯಿದೆ. ಈ ಸಂದರ್ಭದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆಯೊಂದನ್ನು ನೀಡಿದೆ.


ಸ್ವಾತಂತ್ರ್ಯ ದಿನಾಚರಣೆ ಆಚರಿಸುವಾಗ ಕೈಯಲ್ಲಿ ಭಾರತದ ಬಾವುಟ ಹಿಡಿದು ಸಂಭ್ರಮಿಸಲು ಕಡಿಮೆ ವೆಚ್ಚದಲ್ಲಿ ಸಿಗುವ ಪ್ಲಾಸ್ಟಿಕ್ ಧ್ವಜಗಳನ್ನು ಬಳಸಲಾಗುತ್ತದೆ. ಬಳಿಕ ಅದನ್ನು ಎಲ್ಲೆಂದರಲ್ಲಿ ಬಿಸಾಕಲಾಗುತ್ತದೆ. ಆದರೆ ಇದರಿಂದ ದೇಶದ ಹೆಮ್ಮೆಯ ಪ್ರತೀಕಕ್ಕೆ ಅವಮಾನವಾಗುತ್ತದೆ.

ಹೀಗಾಗಿ ಈ ಬಾರಿ ಪ್ಲಾಸ್ಟಿಕ್ ಧ್ವಜ ಮಾರುಕಟ್ಟೆಯಲ್ಲಿ ಲಭ್ಯವಾಗದಂತೆ ನೋಡಿಕೊಳ್ಳಿ ಎಂದು ಕೇಂದ್ರ ರಾಜ್ಯಗಳಿಗೆ ಸೂಚನೆ ನೀಡಿದೆ. ಅದೇ ರೀತಿ, ಕೊರೋನಾ ಕಾರಣದಿಂದ ಮಾಸ್ಕ್ ಇತ್ತೀಚೆಗೆ ಜನ ಸಾಮಾನ್ಯರ ಬದುಕಿನ ಭಾಗವಾಗಿದೆ. ಕೆಲವರು ಇಲ್ಲಿಯೂ ಫ್ಯಾಷನ್ ಗೆ ಬೆಲೆ ಕೊಡುತ್ತಾರೆ. ಹೀಗಾಗಿ ಸ್ವಾತಂತ್ರ್ಯ ದಿನಕ್ಕೆ ನಮ್ಮ ಧ್ವಜದ ಬಣ್ಣದ ಮಾಸ್ಕ್ ಗಳನ್ನು ಬಳಸಿ ಬಳಿಕ ಅದನ್ನು ಎಲ್ಲೆಂದರಲ್ಲಿ ಬಿಸಾಕಿ ಅವಮಾನಿಸುವುದು ಬೇಡ ಎನ್ನುವುದು ನಮ್ಮ ಕಳಕಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊರರಾಜ್ಯದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ರೌಡಿ ಅರೆಸ್ಟ್