Publish Date: Sun, 15 Aug 2021 (08:55 IST)
Updated Date: Sun, 15 Aug 2021 (09:15 IST)
ನವದೆಹಲಿ: ಇಂದು ದೇಶದಾದ್ಯಂತ 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಆದರೆ ಕಳೆದ ಎರಡು ವರ್ಷಗಳಿಂದ ಸಂಭ್ರಮದಿಂದ ಓಡಾಡುವ ನಮ್ಮ ಸ್ವಾತಂತ್ರ್ಯವನ್ನು ಕೊರೋನಾ ಕಸಿದುಕೊಂಡಿದೆ.
ಕೊರೋನಾ ಮೂರನೇ ಅಲೆಯ ಭಯದ ನಡುವೆ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ಎಂದಿನ ಆಚರಣೆಗೆ ಬ್ರೇಕ್ ಬಿದ್ದಿದೆ.
ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಜೊತೆಗೆ ಸಾರ್ವಜನಿಕ ಕಾರ್ಯಕ್ರಮಗಳು, ಶಾಲಾ ಮಕ್ಕಳ ಕಾರ್ಯಕ್ರಮಗಳು ಎಲ್ಲದಕ್ಕೂ ಕೊರೋನಾ ಬ್ರೇಕ್ ಹಾಕಿದೆ. ಈ ರೀತಿ ನಮ್ಮ ನಿರ್ಭಯ ಓಡಾಟಕ್ಕೆ ಕಡಿವಾಣ ಹಾಕಿರುವ ಕೊರೋನಾದಿಂದ ಬೇಗನೇ ಸ್ವತಂತ್ರರಾಗೋಣ ಎಂದು ಈ ಸ್ವಾತಂತ್ರ್ಯ ದಿನದಂದು ಹಾರೈಸೋಣ.