Publish Date: Wed, 08 Jul 2026 (10:21 IST)
Updated Date: Wed, 08 Jul 2026 (10:26 IST)
ಬೆಂಗಳೂರು: ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಇಷ್ಟು ದಿನಗಳಾದ್ರೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಇದೀಗ ಸಚಿವಾಕಾಂಕ್ಷಿಗಳು ರಾಹುಲ್ ಗಾಂಧಿ ಯಾವಾಗ ಫಾರಿನ್ ಟೂರ್ ಮುಗಿಸಿ ಬರ್ತಾರಪ್ಪಾ ಎಂದು ಕಾತುರದಿಂದ ಕಾಯುತ್ತಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ತಿಂಗಳು ಕಳೆದಿದೆ. ಆದರೆ ಇದುವರೆಗೆ ಪ್ರಮುಖ ಇಲಾಖೆಗಳಿಗೇ ಸಚಿವರ ನೇಮಕವಾಗಿಲ್ಲ. ಶಾಲೆ ಶುರುವಾಗಿ ಒಂದು ತಿಂಗಳಾಗಿದ್ದರೂ ಶಿಕ್ಷಣ ಸಚಿವರೇ ಇಲ್ಲ ಎಂದು ವಿಪಕ್ಷಗಳೂ ಲೇವಡಿ ಮಾಡುತ್ತಿವೆ.
ಈ ನಡುವೆ ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದು ಎಂದು ಹಲವರು ಲಾಬಿ ನಡೆಸುತ್ತಿದ್ದಾರೆ. ಆದರೆ ಸದ್ಯಕ್ಕೆ ಕಾಂಗ್ರೆಸ್ ನಾಯಕರು ಯಾವುದನ್ನೂ ತೀರ್ಮಾನಿಸುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಕಾರಣ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದು.
ಕಳೆದ ಕೆಲವು ದಿನಗಳಿಂದ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇನ್ನೂ ವಾಪಸ್ ಬಂದಿಲ್ಲ. ನಾಳೆ ಅಥವಾ ನಾಡಿದ್ದು ಅವರು ಭಾರತಕ್ಕೆ ಬಂದಿಳಿಯುವ ನಿರೀಕ್ಷೆಯಿದೆ. ಹೀಗಾಗಿ ಅವರು ಬರುವವರೆಗೂ ಕ್ಯಾಬಿನೆಟ್ ವಿಸ್ತರಣೆ, ಸಚಿವ ಸ್ಥಾನ ಹಂಚಿಕೆ ಕುರಿತು ಯಾವುದೇ ತೀರ್ಮಾನವಾಗಲ್ಲ. ಇದಕ್ಕಾಗಿ ಈಗ ಕಾಂಗ್ರೆಸ್ ಸಚಿವಾಕಾಂಕ್ಷಿಗಳು ರಾಹುಲ್ ಯಾವಾಗ ಬರ್ತಾರಪ್ಪಾ ಎಂದು ಕಾದು ಕುಳಿತಿದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ