Select Your Language

Notifications

webdunia
webdunia
webdunia
webdunia

ನಾಯಿಗೆ ಯಾಕ್ರೀ ಹೊಡೆದ್ರಿ ಎಂದು ಹೀರೋ ಆಗಲು ಹೊರಟ: ಕೊನೆಗೆ ಆತನಿಗೇ ನಾಯಿ ಮಾಡಿದ್ದು ನೋಡಿದ್ರೆ ಏನನ್ನಬೇಕು ನೀವೇ ಹೇಳಿ video

Viral video dog bite
Photo Credit: X
ಯಾಕಪ್ಪಾ ನಾಯಿಗೆ ಹೊಡೆಯುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿ ಹೀರೋ ಆಗಲು ಹೊರಟ ವ್ಯಕ್ತಿಗೆ ಅದೇ ನಾಯಿ ಮಾಡಿದ್ದೇನು ನೋಡಿದ್ರೆ ನಗಬೇಕೋ, ಅಳಬೇಕೋ ನೀವೇ ನೋಡಿ ಹೇಳಿ.

ಮನುಷ್ಯ ಯಾರನ್ನೋ ನಂಬಿ ಅಥವಾ ಯಾರದ್ದೋ ಪರವಾಗಿ ಧಾವಿಸಿ ನಿಂತಾಗ, ಅದೇ ವ್ಯಕ್ತಿ ಬೆನ್ನಿಗೆ ಚೂರಿ ಹಾಕಿದರೆ "ನಾನು ಯಾರಿಗಾಗಿ ಹೋರಾಡಿದೆನೋ ಅವನೇ ನನಗೆ ದ್ರೋಹ ಬಗೆದ" ಎಂದು ಕೈಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಇಂತಹದ್ದೇ ಒಂದು ಘಟನೆ ಪ್ರಾಣಿ ಪ್ರಪಂಚ ಮತ್ತು ಮನುಷ್ಯನ ನಡುವೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ನಗೆಪಾಟಲಿಗೆ ಈಡಾಗಿದೆ. ಹುಚ್ಚು ನಾಯಿಯೊಂದರ ದಾಳಿಯಿಂದ ಅದನ್ನು ಬಚಾವ್ ಮಾಡಲು ಹೋದ ವ್ಯಕ್ತಿಗೇ ಆ ನಾಯಿ ಕಚ್ಚಿ ಸರಿಯಾದ 'ಬಹುಮಾನ' ನೀಡಿದೆ!

ಬೀದಿಯಲ್ಲಿ ರೇಬೀಸ್ ರೋಗದಿಂದ ಬಳಲುತ್ತಿದ್ದ ಹುಚ್ಚು ನಾಯಿಯೊಂದು ಅಲ್ಲೇ ಕಟ್ಟಿದ್ದ ಹಸುವಿಗೆ ಕಚ್ಚಲು ಪ್ರಾರಂಭಿಸಿದೆ. ಇದನ್ನು ಗಮನಿಸಿದ ಹಸುವಿನ ಮಾಲೀಕ ಅಥವಾ ಸ್ಥಳೀಯ ವ್ಯಕ್ತಿಯೊಬ್ಬರು ತಕ್ಷಣ ಹಸುವನ್ನು ರಕ್ಷಿಸಲು ಧಾವಿಸಿದ್ದಾರೆ. ಕೈಯಲ್ಲೊಂದು ಕೋಲು ಹಿಡಿದು, ಆ ಹುಚ್ಚು ನಾಯಿಗೆ ಹೊಡೆದು ಅಲ್ಲಿಂದ ಓಡಿಸಲು ತೀವ್ರವಾಗಿ ಪ್ರಯತ್ನಿಸಿದ್ದಾರೆ.

ಹಸುವಿನ ಮಾಲೀಕ ನಾಯಿಯನ್ನು ಕೋಲಿನಿಂದ ಹೊಡೆಯುತ್ತಿರುವುದನ್ನು ಕಂಡು ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿಗೆ 'ಪ್ರಾಣಿ ದಯೆ' ಜಾಗೃತವಾಗಿದೆ. ಆತ ತಕ್ಷಣ ಓಡಿ ಬಂದು, "ನಾಯಿಗೆ ಹೊಡೆಯಬೇಡಿ, ಅದಕ್ಕೆ ಜೀವ ಇಲ್ವಾ?" ಎಂದು ಹೇಳುತ್ತಾ ನಾಯಿಯನ್ನು ಹೊಡೆಯುತ್ತಿದ್ದ ವ್ಯಕ್ತಿಯನ್ನು ತಡೆದಿದ್ದಾನೆ. ನಾಯಿಯ ರಕ್ಷಣೆಗೆ ನಿಂತು, ಅದನ್ನು ಹೊಡೆಯದಂತೆ ಆತ ತೀವ್ರವಾಗಿ ವಾದಿಸಿದ್ದಾನೆ.

ಇತ್ತ ಇವರಿಬ್ಬರ ನಡುವೆ ಜಗಳ ನಡೆಯುತ್ತಿರುವಾಗಲೇ, ಕೆರಳಿದ್ದ ಆ ಹುಚ್ಚು ನಾಯಿ ತನಗೆ ಕೋಲಿನಿಂದ ಹೊಡೆದವನನ್ನು ಬಿಟ್ಟು, ತನ್ನ ಪರವಾಗಿ ವಕಾಲತ್ತು ವಹಿಸಿ ತನ್ನನ್ನು ರಕ್ಷಿಸಲು ಬಂದ 'ದೇವದೂತ'ನ ಮೇಲೆಯೇ ಹಠಾತ್ತನೆ ದಾಳಿ ಮಾಡಿದೆ!

ಕ್ಷಣಾರ್ಧದಲ್ಲಿ ಆ ನಾಯಿ ತನ್ನನ್ನು ರಕ್ಷಿಸಿದ ವ್ಯಕ್ತಿಯ ಕಾಲನ್ನೇ ಗಟ್ಟಿಯಾಗಿ ಕಚ್ಚಿ ಹಿಡಿದಿದೆ. ನೋವಿನಿಂದ ಆ ವ್ಯಕ್ತಿ ಕಿರುಚಾಡಲಾರಂಭಿಸಿದ್ದು, ಕೊನೆಗೆ ಸ್ಥಳೀಯರು ಸೇರಿ ಆತನನ್ನು ನಾಯಿಯ ದವಡೆಯಿಂದ ಬಿಡಿಸಿದ್ದಾರೆ.

pic.twitter.com/aredt6jiyo

 

— Ajay Pandey (@AjayPandeyAAS) July 6, 2026

Share this Story:

Follow Webdunia kannada

ಮುಂದಿನ ಸುದ್ದಿ

ಶೇ 90 ರಷ್ಟು ಕುಂಕುಮ ಬರೋದು ಇಸ್ಲಾಮಿಕ್ ರಾಷ್ಟ್ರಗಳಿಂದ: ಪ್ರಿಯಾಂಕ್ ಖರ್ಗೆ ವ್ಯಂಗ್ಯಕ್ಕೆ ನೆಟ್ಟಿಗರು ಏನಂದ್ರು ಗೊತ್ತಾ Video