Publish Date: Mon, 29 Jun 2026 (10:13 IST)
Updated Date: Mon, 29 Jun 2026 (10:15 IST)
ಬೆಂಗಳೂರು: ಈ ಒಂದು ವಿಚಾರದಲ್ಲಿ ತಾನು ಸಿದ್ದರಾಮಯ್ಯನವರಂತಲ್ಲ, ಸಿಎಂ ಡಿಕೆ ಶಿವಕುಮಾರ್ ನನ್ನ ಸ್ಟೈಲೇ ಬೇರೆ ಎಂದು ಸೂಚನೆ ಕೊಟ್ಟಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಪದೇ ಪದೇ ಕೇಂದ್ರದ ಮೇಲೆ ವಾಗ್ದಾಳಿ ನಡೆಸುತ್ತಲೇ ಇದ್ದರು. ರಾಜ್ಯದ ಯಾವುದೇ ಯೋಜನೆಗೆ ಬೆಂಬಲ ಕೊಡಲ್ಲ ಎಂದು ಬಜೆಟ್ ಭಾಷಣಗಳಲ್ಲೂ ಟೀಕಿಸುತ್ತಿದ್ದರು. ಕೇಂದ್ರದ ಯೋಜನೆಗಳಿಗೆ ಸೆಡ್ಡು ಹೊಡೆಯುತ್ತಿದ್ದರು.
ಆದರೆ ಈಗ ಡಿಕೆ ಶಿವಕುಮಾರ್ ಬೇರೆಯೇ ಧೋರಣೆ ಹೊಂದಿದ್ದಾರೆ. ರಾಜ್ಯಕ್ಕೆ ಬರಬೇಕಾದ ಯೋಜನೆಗಳನ್ನು ತರಲು, ಕೇಂದ್ರದ ಸಹಾಯ ಪಡೆಯಲು ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳಲು ತೀರ್ಮಾನಿಸಿದ್ದಾರೆ.
ಚುನಾವಣೆ ಹಾಗೂ ರಾಜಕೀಯ ರಂಗದಲ್ಲಿ ಸದ್ಧಾಂತಿಕ ಹೋರಾಟಗಳು ಏನೇ ಇದ್ದರೂ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಡೆರಹಿತವಾಗಿ ತಲುಪಿಸಲು ಕೇಂದ್ರ-ರಾಜ್ಯಗಳ ನಡುವಿನ ಸಮನ್ವಯತೆ ಮುಖ್ಯ ಎಂದು ಡಿ.ಕೆ. ಶಿವಕುಮಾರ್ ಆಪ್ತ ವಲಯದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಸೌಹಾರ್ದಯುತ ಹೆಜ್ಜೆಯು ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಸವಲತ್ತು ಹಾಗೂ ಅನುದಾನಗಳನ್ನು ತರಲು ನೆರವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಭಾವಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ