Publish Date: Sat, 27 Jun 2026 (17:43 IST)
Updated Date: Sat, 27 Jun 2026 (17:45 IST)
ರಾಮನಗರ: ಬಿಡದಿ ಟೌನ್ ಶಿಪ್ ವಿವಾದದ ವಿರುದ್ಧ ಇಂದು ಎಚ್ ಡಿ ಕುಮಾರಸ್ವಾಮಿ ಭೈರಮಂಗಲದಲ್ಲಿ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಬರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಡದಿಯಲ್ಲಿ ಇಂದು ರೈತರ ಸಮ್ಮುಖದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆ ನಡೆಸಿದರು. ಈ ವೇಳೆ ಹಲವರು ಟೌನ್ ಶಿಪ್ ವಿರೋಧಿಸಿ ಹಸಿರು ಬಾವುಟ ಧರಿಸಿ ಬಂದಿದ್ದರೆ ಟೌನ್ ಶಿಪ್ ಪರ ಇರುವ ಕೆಲವರು ಕೆಂಪು ಶಾಲು ಧರಿಸಿ ಕೇಂದ್ರ ಸಚಿವರಿಗೆ ವಿರೋಧ ಸೂಚಿಸಿದ್ದರು.
ಇಂದಿನ ಸಭೆಗೆ ಬರುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಮೊನ್ನೆಯೇ ಕುಮಾರಸ್ವಾಮಿ ಆಹ್ವಾನವಿತ್ತಿದ್ದರು. ಆದರೆ ಅವರು ಬರದೇ ಇರುವ ಕಾರಣಕ್ಕೆ ವಾಗ್ದಾಳಿ ನಡೆಸಿದ ಎಚ್ ಡಿಕೆ ಬಿಡದಿ ಉಪನಗರ ಯೋಜನೆಗಾಗಿ ಸರಕಾರ ಅನ್ಯಾಯವಾಗಿ ಫಲವತ್ತಾದ ಕೃಷಿ ಭೂಮಿ ಕಸಿದುಕೊಳ್ಳುತ್ತಿರುವ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚಿಸಲು ನಾನು ಭೈರಮಂಗಲದಲ್ಲಿ ರೈತರ ವೇದಿಕೆಯಲ್ಲಿ ಪಾಲ್ಗೊಂಡು ಅವರಿಗಾಗಿ ನಿರೀಕ್ಷಿಸಿದೆ.
ವಿಧಾನಸೌಧಕ್ಕೆ ಚರ್ಚೆಗೆ ಕರೆದಿದ್ದ ಮುಖ್ಯಮಂತ್ರಿಗಳು ಬಿಡದಿಗೆ ಬರಬೇಕೆಂದು ಪತ್ರ ಬರೆದಿದ್ದರು. ಆದರೆ, ನೊಂದ ರೈತರ ಸಮ್ಮುಖದಲ್ಲಿ ಚರ್ಚೆ ನಡೆಯಬೇಕೆಂದು ನಾನು ವಿನಂತಿ ಮಾಡಿದ್ದೆ. ಆದರೆ ಅವರಿಗೆ 'ಬಿಡುವಿಲ್ಲದ' ಕಾರಣಕ್ಕೆ ಸಭೆಯಲ್ಲಿ ನಾನೊಬ್ಬನೇ ರೈತರೊಂದಿಗೆ ಸಂವಾದ ನಡೆಸಿದೆ. ಮುಖ್ಯಮಂತ್ರಿಗಳ ಗೈರು ಹಾಜರಿ ರೈತರ ಸಮಸ್ಯೆಗಳಿಗೆ ಉತ್ತರವಲ್ಲ ಮತ್ತು ಪರಿಹಾರವೂ ಅಲ್ಲ. ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡಲು ರೈತರು ಸಿದ್ಧರಿಲ್ಲ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ