Select Your Language

Notifications

webdunia
webdunia
webdunia
webdunia

ಮನೆ ವಿಷ್ಯಕ್ಕೆ ಬರಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ ಅನಿತಾ ಕುಮಾರಸ್ವಾಮಿ: ಕ್ಷಮೆ ಯಾಚಿಸಿದ ಸಚಿವ ಎಂಬಿ ಪಾಟೀಲ್

Anitha Kumaraswamy
ಬೆಂಗಳೂರು: ರಾಜಕೀಯ ಕಾರಣಕ್ಕೆ ಮನೆ ವಿಚಾರವನ್ನು ಎಳೆದು ತರಬೇಡಿ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅನಿತಾ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಸಚಿವ ಎಂಬಿ ಪಾಟೀಲ್ ಕ್ಷಮೆ ಯಾಚಿಸಿದ್ದಾರೆ.

ಬಿಡದಿ ಟೌನ್ ಶಿಪ್ ವಿವಾದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ವಾಗ್ಯುದ್ಧ ನಡೆಯುತ್ತಿದೆ. ಈ ನಡುವೆ ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ ನೂರು ಎಕರೆ ಜಮೀನು ಇದೆ ಎಂದು ಬ್ಯಾನರ್ ಹಾಕಲಾಗಿತ್ತು. ಇದೇ ವಿಚಾರವನ್ನು ಎಂಬಿ ಪಾಟೀಲ್ ಪ್ರಸ್ತಾಪಿಸಿದ್ದರು.

ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದ ಅನಿತಾ ಕುಮಾರಸ್ವಾಮಿ ‘ಎಂಬಿ ಪಾಟೀಲ್ ಹೇಳಿದಂತೆ ನನ್ನ ಹೆಸರಿನಲ್ಲಿ 100 ಎಕರೆ ಇಲ್ಲ. 32 ಎಕರೆ ಜಮೀನು ಇದೆ. ರಾಜಕೀಯ ಲಾಭಕ್ಕಾಗಿ ಮನೆಯವರ ಹೆಸರು ಎಳೆದು ತರಬೇಡಿ. ಇದು ಯಾರಿಗೂ ಶೋಭೆ ತರುವುದಿಲ್ಲ. ಅನಗತ್ಯವಾಗಿ ಇಲ್ಲಸಲ್ಲದ ಆರೋಪ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಂಬಿ ಪಾಟೀಲ್ ‘ಅನಿತಾ ಕುಮಾರಸ್ವಾಮಿ ನನ್ನ ಸಹೋದರಿಯಿದ್ದಂತೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ವಿಷಾಧಿಸುತ್ತೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಂಥಾ ದಡ್ಡಿ.. ಮೊಬೈಲ್ ಅಂಗಡಿ ಇಟ್ಟಿದ್ದ ಚೇತನ್ ಗಾಗಿ ಕೋಟ್ಯಾಧಿಪತಿ ಕೇತನ್ ನನ್ನು ಸಿಯಾ ಹತ್ಯೆ ಮಾಡಿದ್ದೇಕೆ: ರಹಸ್ಯ ಬಯಲು