Daily Horoscope

Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಪಂಥಾಹ್ವಾನದ ಬಗ್ಗೆ ಕೇಳಿದ್ದಕ್ಕೆ ಕುಮಾರಸ್ವಾಮಿ ರಿಯಾಕ್ಷನ್ ಹೇಗಿತ್ತು ಗೊತ್ತಾ

HD Kumaraswamy
ಬೆಂಗಳೂರು: ಬಿಡದಿ ಟೌನ್ ಶಿಪ್ ವಿವಾದದ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆಗೆ ಬರುವಂತೆ ದಿನ ನಿಗದಿ ಮಾಡಿದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

 
ಬಿಡದಿ ಟೌನ್ ಶಿಪ್ ವಿಚಾರವಾಗಿ ಬಹಿರಂಗ ಚರ್ಚೆಗೆ ಮಾಡೋಣ ಎಂದು ಕುಮಾರಸ್ವಾಮಿ ನಿನ್ನೆ ಆಹ್ವಾನ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್, ಜೂನ್ 26 ಕ್ಕೆ ವಿಧಾನಸೌಧಕ್ಕೆ ಬನ್ನಿ ಎಂದು ಕುಮಾರಸ್ವಾಮಿಗೆ ಆಹ್ವಾನ ನೀಡಿದ್ದರು. ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

 
‘ಸವಾಲು ಪ್ರತಿ ಸವಾಲಿನ ಪ್ರಶ್ನೆಯಲ್ಲ. ಈಗಾಗಲೇ ಸರ್ಕಾರ ರೈತರ ಅಭಿಪ್ರಾಯಗಳಿಗೆ ವಿರುದ್ಧವಾಗಿ ರೈತರ ಭೂಮಿಯನ್ನು ಸ್ವಾದೀನ ಮಾಡಿ ಕೈಗಾರಿಕೆ ಸ್ಥಾಪನೆ ಮಾಡಲು ಹೊರಟಿದ್ದಾರೆ. ರೈತರು 465 ದಿನದಿಂದ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಹೇಳಿದೆ 80% ರೈತರು ಒಪ್ಪಿದ್ದಾರೆ ಎಂದು. ಇನ್ನು ಶೇ.70 ರೈತರು ಹೇಳ್ತಿದ್ದಾರೆ ನಾವು ಒಪ್ಪಿಲ್ಲ ಎಂದು. ಇದರ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಎಂದು ಕರೆದಿದ್ದೆ. ಮುಖ್ಯಮಂತ್ರಿಗಳು ಜೂನ್ 26 ಕ್ಕೆ ಬನ್ನಿ ಎಂದಿದ್ದಾರೆ. ನನಗೆ ಜೂನ್ 26 ಕ್ಕೆ ಆಗಲ್ಲ, 27 ಕ್ಕೆ ರೆಡಿ ಇದ್ದೇನೆ’  ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 ಡಿ ಕುಮಾರಸ್ವಾಮಿ ಡಿಕೆ ಶಿವಕುಮಾರ್ ಮೀಟಿಂಗ್, ಬಿಡದಿ ಟೌನ್ ಶಿಪ್ ವಿವಾದ, ಕರ್ನಾಟಕ

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳು: ಯಾರ ಆಸ್ತಿ ಎಷ್ಟು, ಹೆಚ್ಚಾಗಿದ್ದು ಹೇಗೆ ಸಂಪೂರ್ಣ ವಿವರ