Select Your Language

Notifications

webdunia
webdunia
webdunia
webdunia

ಬನ್ನಿ ಚರ್ಚೆ ಮಾಡೋಣ.. ಎಂದು ಆಹ್ವಾನ ಕೊಟ್ಟ ಕುಮಾರಸ್ವಾಮಿ, ನಾನು ರೆಡಿ ಎಂದು ಡೇಟ್ ಕೊಟ್ಟ ಡಿಕೆಶಿ

DK Shivakumar-HD Kumaraswamy
ಬೆಂಗಳೂರು: ಬಿಡದಿ ಟೌನ್ ಶಿಪ್ ವಿವಾದದ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೀಡಿದ ಆಹ್ವಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಒಪ್ಪಿ ಜೂನ್ 26 ಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದಕ್ಕೀಗ ಕುಮಾರಸ್ವಾಮಿ ಕೂಡಾ ಒಪ್ಪಿದ್ದಾರೆ.

ನಿನ್ನೆ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ, ಬಿಡದಿ ಟೌನ್ ಶಿಪ್ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಸಿಎಂ ಡಿಕೆ ಶಿವಕುಮಾರ್ ತಮ್ಮ ಸಿಎಂ ಕಚೇರಿಯಿಂದಲೇ ಎಚ್ ಡಿಕೆಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಜೂನ್ 26 ರಂದು ಬೆಳಿಗ್ಗೆ 11 ಗಂಟೆಗೆ ತಾವು ಮತ್ತು ತಮ್ಮ ತಂಡದ 5 ಸದಸ್ಯರೊಂದಿಗೆ ವಿಧಾನಸೌಧಕ್ಕೆ ಬರುವಂತೆ ಡಿಕೆ ಶಿವಕುಮಾರ್ ಅಧಿಕೃತ ಆಹ್ವಾನ ನೀಡಿದ್ದಾರೆ. ಇದಕ್ಕೀಗ ಕುಮಾರಸ್ವಾಮಿ ಕೂಡಾ ಸ್ಪಂದಿಸಿದ್ದಾರೆ.

‘ಬಿಡದಿ ನೂತನ ಟೌನ್'ಶಿಪ್ ಬಗ್ಗೆ ಚರ್ಚಿಸಲು ಬನ್ನಿ' ಎಂದು ಮಾನ್ಯ ಮುಖ್ಯಮಂತ್ರಿಗಳು ನನ್ನನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದಾರೆ.

ಸಮಸ್ಯೆ ನನ್ನೊಬ್ಬನದ್ದಲ್ಲ, ಇದು ಸಾವಿರಾರು ರೈತರ ಬದುಕಿನ ಪ್ರಶ್ನೆ. ನಾಲ್ಕು ಗೋಡೆಗಳ ನಡುವೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ನೊಂದ ರೈತರು ಹಗಲಿರುಳು ಪ್ರತಿಭಟನೆ ನಡೆಸುತ್ತಿರುವ ಬೈರಮಂಗಲದಲ್ಲಿ ಬಹಿರಂಗವಾಗಿ ಚರ್ಚೆ ನಡೆಯುವುದು ನ್ಯಾಯೋಚಿತ. ಇದನ್ನೇ ಪತ್ರ ಮುಖೇನ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ.

ದಿನಾಂಕ 26-06-2026ರ ಬೆಳಗ್ಗೆ 11 ಗಂಟೆಗೆ ನನ್ನನ್ನು ಚರ್ಚೆಗೆ ಕರೆದಿದ್ದಾರೆ. ಅಂದು ಪೂರ್ವನಿಗದಿತ ಕಾರ್ಯಕ್ರಮಗಳಿವೆ. ದಿನಾಂಕ 27-06-2026 ರಂದು ಯಾವುದೇ ಸಮಯಕ್ಕೆ ಬೈರಮಂಗಲದಲ್ಲಿ ನೊಂದ ಅನ್ನದಾತರ ಸಮ್ಮುಖದಲ್ಲಿ ಸಭೆ ಆಯೋಜಿಸಿದರೆ ಬರಲು ಸಿದ್ಧನಿದ್ದೇನೆ. ಮುಖ್ಯಮಂತ್ರಿಗಳು ಆ ದಿನ ಸಮಯ ನಿಗದಿ ಮಾಡಿ ತಿಳಿಸುತ್ತಾರೆಂದು ಆಶಿಸುತ್ತೇನೆ’ ಎಂದಿದ್ದಾರೆ. ಇದಕ್ಕೀಗ ಡಿಕೆಶಿ ಒಪ್ಪಿ ಹೊಸ ದಿನಾಂಕ, ಸಮಯ ನಿಗದಿ ಮಾಡುತ್ತಾರಾ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2023 ಸಿಎಂ ಬದಲಾವಣೆ ಗುಟ್ಟು ಕೊನೆಗೂ ಬಹಿರಂಗವಾಗಿ ಬಿಚ್ಚಿಟ್ಟ ಡಿಕೆ ಶಿವಕುಮಾರ್