Select Your Language

Notifications

webdunia
webdunia
webdunia
webdunia

2023 ಸಿಎಂ ಬದಲಾವಣೆ ಗುಟ್ಟು ಕೊನೆಗೂ ಬಹಿರಂಗವಾಗಿ ಬಿಚ್ಚಿಟ್ಟ ಡಿಕೆ ಶಿವಕುಮಾರ್

Siddaramaiah-DK Shivakumar-KC Venugopal
ಬೆಂಗಳೂರು: 2023 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿಎಂ ಸ್ಥಾನ ಹಂಚಿಕೆ ಒಪ್ಪಂದವಾಗಿತ್ತೇ ಎಂಬ ಬಗ್ಗೆ ಇದುವರೆಗೆ ಇದ್ದ ರಹಸ್ಯವನ್ನು ಕೊನೆಗೂ ಡಿಕೆ ಶಿವಕುಮಾರ್ ಬಿಟ್ಟುಕೊಟ್ಟಿದ್ದಾರೆ.

ಸ್ವತಃ ಸಿದ್ದರಾಮಯ್ಯನವರೇ ಯಾವ ಒಪ್ಪಂದವೂ ಆಗಿರಲಿಲ್ಲ ಎನ್ನುತ್ತಿದ್ದರು. ಆದರೆ ಡಿಕೆ ಶಿವಕುಮಾರ್ ನಮ್ಮ ನಡುವೆ ಏನು ಮಾತುಕತೆ ಆಗಿದೆ ಎಂದು ನಮಗೆ, ಹೈಕಮಾಂಡ್ ಗೆ ಗೊತ್ತು. ಅದನ್ನೆಲ್ಲಾ ಬಹಿರಂಗವಾಗಿ  ಚರ್ಚೆ ಮಾಡಲ್ಲ. ಎಲ್ಲಾ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎನ್ನುತ್ತಿದ್ದರು.

ಅಂದು ನಡೆದ ಒಪ್ಪಂದ ನಡದಿತ್ತೇ ಅಥವಾ ಏನು ಒಪ್ಪಂದವಾಗಿದೆ ಎಂಬ ಬಗ್ಗೆ ಯಾರೂ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಡಿಕೆ ಶಿವಕುಮಾರ್ ಒಪ್ಪಂದವಾಗಿದ್ದು ನಿಜ ಎಂಬುದನ್ನು ಬಹಿರಂಗಪಡಿಸಿದ್ದಾರೆ. 2023 ಕ್ಕೆ ಚುನಾವಣೆ ಗೆದ್ದಾಗ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದುಕೊಂಡಿದ್ದೆ. ಆದರೆ ಹೈಕಮಾಂಡ್ ನಾಯಕರು ಈ ಬಾರಿ ಸಿದ್ದರಾಮಯ್ಯಗೆ ಅವಕಾಶ ಕೊಡೋಣ. ನಂತರ ನೀವು ಅಧಿಕಾರ ಹಂಚಿಕೆ ಮಾಡಿಕೊಳ್ಳಿ ಎಂದಿದ್ದರು. ಈ ಗುಟ್ಟು ಕೆಲವರಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿರಲಿಲ್ಲ. ನಮ್ಮಲ್ಲಿ ಗುಂಪುಗಳಿಲ್ಲ. ಅಂತಿಮವಾಗಿ ನಾವೆಲ್ಲಾ ಒಂದೇ ಗುಂಪು, ಕಾಂಗ್ರೆಸ್ ಗುಂಪು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದ ಈ ಜಿಲ್ಲೆಗಳಿಗೆ ಇಂದು ಯೆಲ್ಲೊ ಅಲರ್ಟ್