Publish Date: Wed, 17 Jun 2026 (11:55 IST)
Updated Date: Wed, 17 Jun 2026 (12:00 IST)
ಬೆಂಗಳೂರು: ಸಿಎಂ ಆದ ಮೇಲಾದರೂ ಬ್ಲೂ ಫಿಲಂ ಮಾಡ್ಸೋದು, ಪೋಸ್ಟರ್ ಅಂಟಿಸೋದು ಬಿಡಬಹುದು ಎಂದುಕೊಂಡಿದ್ದೆ. ಆದರೆ ಇನ್ನೂ ಬಿಟ್ಟಿಲ್ಲ ಎನ್ನುವುದು ಖಚಿತವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್ ಶಿಪ್ ಗಾಗಿ ರೈತರ ಭೂಮಿ ಒತ್ತುವರಿ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಡಿಕೆಶಿ ನಡುವೆ ಫೈಟ್ ತಾರಕಕ್ಕೇರಿದೆ. ಈ ನಡುವೆ ಬಿಡದಿಯಲ್ಲಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಪೋಸ್ಟರ್ ಅಂಟಿಸಲಾಗಿದೆ. ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಕುಮಾರಸ್ವಾಮಿ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಸಿಎಂ ಆದ ಮೇಲಾದ್ರೂ ಬ್ಲೂ ಫಿಲಂ ಮಾಡಿಸೋದು, ಪೋಸ್ಟರ್ ಅಂಟಿಸೋದು ಬಿಡಬಹುದು ಎಂದುಕೊಂಡಿದ್ದೆ. ಆ ಖಯಾಲಿ ಇನ್ನೂ ಬಿಟ್ಟಿಲ್ಲ. ನನ್ನದು ಬಿಡಿ, ನನ್ನ ಹೆಂಡತಿಯ ಫೋಟೋನೂ ಹಾಕಿದ್ದಾರೆ. 100 ಎಕರೆ ಅಂತ ನಿಖಿಲ್ ಫೋಟೋನೂ ಹಾಕಿದ್ದಾರೆ. ಬಿಡದಿಯಲ್ಲಿ 40 ವರ್ಷದ ಹಿಂದೆ 46 ಎಕರೆ ಕಷ್ಟಪಟ್ಟು ಖರೀದಿ ಮಾಡಿದ ಜಮೀನು. ಅದು ಬಿಟ್ಟು ಯಾವುದೇ ಜಮೀನು ನಮಗಿಲ್ಲ.
ಬೆನ್ನಗಾನಹಳ್ಳಿಯಲ್ಲಿ ಸತ್ತೋದವರ ಹೆಬ್ಬೆಟ್ಟು ಒತ್ತಿಸಿ ಜಮೀನು ತೆಗೆದುಕೊಂಡ ವ್ಯಕ್ತಿ ಈಗ ತಮ್ಮ ಬೆಂಬಲಿಗರಿಗೆ ಹೇಳಿ ನಮ್ಮ ಪೋಸ್ಟರ್ ಹಾಕಿದ್ದಾರೆ. ಇದನ್ನೆಲ್ಲಾ ಜನ ನಂಬ್ತಾರಾ? ಸಿಎಂ ಆದ ಮೇಲಾದ್ರೂ ಒಂದು ಸ್ಟ್ಯಾಂಡರ್ಡ್ ಬೇಡ್ವಾ? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ