Publish Date: Wed, 17 Jun 2026 (09:37 IST)
Updated Date: Wed, 17 Jun 2026 (09:39 IST)
ಬೆಂಗಳೂರು: ಸಂಘದ ಲೆಕ್ಕ ಕೇಳುವ ನಿಮಗೆ ಮದರಸಾ ಚಟುವಟಿಕೆಗಳು ಕಾಣಿಸಲ್ವಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಆರ್ ಎಸ್ಎಸ್ ಚಟುವಟಿಕೆಗಳ ಬಗ್ಗೆ ಲೆಕ್ಕಪತ್ರದ ಬಗ್ಗೆ ಅಧಿಕೃತವಾಗಿ ಪ್ರಶ್ನೆ ಕೇಳಿದ್ದೇನೆ. ಇದಕ್ಕೆ ಉತ್ತರ ಕೊಡಲೇಬೇಕು. ಇಲ್ಲದೇ ಹೋದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಮದರಸಾ ಚಟುವಟಿಕೆಗಳು ನಿಮಗೆ ಕಾಣಿಸಲ್ವಾ? ರಾಷ್ಟ್ರ ವಿಧ್ವಂಸಕ ಚಟುವಟಿಕೆಯ ಅನೇಕ ಅಲ್ಪಸಂಖ್ಯಾತ ಹೆಸರಿನ ಮತೀಯವಾದಿ ಸಂಘಟನೆಗಳು ಈ ದೇಶದಲ್ಲಿ ತಲೆಯೆತ್ತಿರುವುದು, ಅಕ್ರಮವಾಗಿ ವಿದೇಶೀ ದೇಣಿಗೆ ಪಡೆದು ದೇಶ ವಿರೋಧಿ ಚಟುವಟಕೆ ನಡೆಸುವ ಸಂಘಟನೆಗಳು ನಿಮ್ಮ ಗಮನಕ್ಕೆ ಬರುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಆರ್ ಎಸ್ಎಸ್ ಸಂಘ ಮದರಸಾಗಳಂತೆ ಗುಪ್ತವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಕೇವಲ ಮತಾಂಧತೆಯನ್ನು ಬಿತ್ತುವುದಿಲ್ಲ. ಇಂತಹ ಸಂಸ್ಥೆಗಳ ಮೇಲೆ ನಿಮ್ಮ ಕಣ್ಣು ಬೀಳಲ್ಲ, ಕಿವಿಯೂ ಕೇಳಿಸಲ್ಲ ಎಂದು ವಿಜಯೇಂದ್ರ ಕಿಡಿ ಕಾರಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ