Publish Date: Sat, 20 Jun 2026 (09:05 IST)
Updated Date: Sat, 20 Jun 2026 (09:09 IST)
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆಯಲು ಪರಿಷ್ಕರಣೆಗೆ ಮುಂದಾಗಿದ್ದಾರೆ. ಅದರಂತೆ ಮನೆ ಮನೆಗೆ ಬಂದು ಅಧಿಕಾರಿಗಳು ಪರಿಷ್ಕರಣೆ ನಡೆಸಲಿದ್ದಾರೆ.
ವಿಶೇಷವಾಗಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಯಲ್ಲಿ ಅನೇಕ ಅನರ್ಹರೂ ಲಾಭ ಪಡೆಯುತ್ತಿದ್ದಾರೆ. ಇದಕ್ಕಾಗಿ ನಿನ್ನೆ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಸಿಎಂ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲು ಸೂಚಿಸಿದ್ದಾರೆ. ಹೀಗಾಗಿ ಇನ್ನು ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಹಾಕಿದ ಬಳಿಕ ಅಧಿಕಾರಿಗಳು ನಿಮ್ಮ ಮನೆಗೇ ಬಂದು ಪರಿಶೀಲನೆ ನಡೆಸಲಿದ್ದಾರೆ.
ಅಧಿಕಾರಿಗಳು ಸರ್ವೇ ವೇಳೆ 10 ಪ್ರಶ್ನೆಗಳನ್ನು ಮುಂದಿಡಲಿದ್ದಾರೆ. ನಿಮ್ಮ ಆಧಾರ್ ಕಾರ್ಡ್, ಯಜಮಾನಿ ಹೆಸರು, ಪಡಿತರ ಚೀಟಿ ವಿವರ, ಮನೆ ವಿಳಾಸ, ಮತದಾರರ ಗುರುತಿನ ಚೀಟಿ, ಪತಿಯ ಮಾಹಿತಿ, ಮೊಬೈಲ್ ಸಂಖ್ಯೆ ವಿವರಗಳನ್ನು ಕೇಳಿ ಪಡೆಯಲಿದ್ದಾರೆ. ಈ ವೇಳೆ ಅನರ್ಹರೆನಿಸಿದವರ ಹೆಸರುಗಳು ಗ್ಯಾರಂಟಿ ಯೋಜನೆಯಿಂದ ಹೊರಬೀಳಲಿದೆ.
ಗ್ಯಾರಂಟಿ ಯೋಜನೆಯಿಂದ ನಿಜವಾದ ಫಲಾನುಭವಿಗಳು ವಂಚಿತರಾಗಬಾರದು. ಆದರೆ ಅನರ್ಹರಾದವರು ಯೋಜನೆಯ ದುರುಪಯೋಗಪಡಿಸಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ