Publish Date: Sun, 28 Jan 2018 (21:15 IST)
Updated Date: Sun, 28 Jan 2018 (21:17 IST)
ಮಹಾದಾವಿ ವಿಚಾರದಲ್ಲಿ ನ್ಯಾಯಾಧೀಕರಣದಲ್ಲಿ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ತಾನೇ ಕಟ್ಟಿದ ತಡೆಗೋಡೆಯನ್ನು ಕರ್ನಾಟಕ ಒಡೆದು ಹಾಕಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.
ಮಹಾದಾಯಿ ನೀರು ಉಳಿಸಿಕೊಳ್ಳಲು ಗೋವಾ ಹೋರಾಟವನ್ನು ಅರಿತಿರುವ ಕರ್ನಾಟಕ ನ್ಯಾಯಾಧೀಕರಣದಲ್ಲಿ ತನ್ನ ಪಾಲಿಗೆ ಮುಳುವಾಗಲಿದೆ ಎಂದು ಕಳಸಾ ಬಂಡೂರಿ ಯೋಜನೆ ಕಾಲುವೆಯ ತಡೆಗೋಡೆಯನ್ನು ಕರ್ನಾಟಕ ಒಡೆದು ಹಾಕಿದೆ ಎಂದು ಆರೋಪಿಸಿದ್ದಾರೆ.
ಮಹಾದಾಯಿ ವಿಚಾರದಲ್ಲಿ ಕರ್ನಾಟಕದ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಲಾಗುವುದು. ಮಹಾದಾಯಿ ನೀರು ತಿರುಗಿಸಿಕೊಳ್ಳಲು ಕರ್ನಾಟಕ ನಡೆಸಿರುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.