Select Your Language

Notifications

webdunia
webdunia
webdunia
webdunia

ಕಣಕುಂಬಿಗೆ ಗೋವಾ ನಿಯೋಗ ಶಿಷ್ಠಾಚಾರ ಉಲ್ಲಂಘಿಸಿ ಭೇಟಿ– ಎಂ.ಬಿ.ಪಾಟೀಲ್

ಕಣಕುಂಬಿಗೆ ಗೋವಾ ನಿಯೋಗ ಶಿಷ್ಠಾಚಾರ ಉಲ್ಲಂಘಿಸಿ ಭೇಟಿ– ಎಂ.ಬಿ.ಪಾಟೀಲ್
ಬಾಗಲಕೋಟೆ , ಭಾನುವಾರ, 28 ಜನವರಿ 2018 (21:06 IST)
ಕಳಸಾ ಬಂಡೂರಿ ಯೋಜನೆಯ ಕಣಕುಂಬಿ ಪ್ರದೇಶಕ್ಕೆ ಗೋವಾದ ನಿಯೋಗ ಶಿಷ್ಠಾಚಾರ ಉಲ್ಲಂಘಿಸಿ ಕಳ್ಳತನದಿಂದ ಭೇಟಿ ನೀಡಿರುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳ್ಳತನದಿಂದ ಭೇಟಿ ನೀಡುವ ಅಗತ್ಯವೇ ಇರಲಿಲ್ಲ. ಸರ್ಕಾರಕ್ಕೆ ಮಾಹಿತಿ ನೀಡಿದ್ದರೆ ಶಿಷ್ಠಾಚಾರದ ಪ್ರಕಾರ ಅಗತ್ಯ ಭದ್ರತೆ ಒದಗಿಸಲಾಗುತ್ತಿತ್ತು ಎಂದಿದ್ದಾರೆ.

ಅಕ್ರಮವಾಗಿ ಕಾಮಗಾರಿ ಕೈಗೊಳ್ಳುತ್ತಿಲ್ಲ. ಅಷ್ಟಕ್ಕೂ ಈ ವಿವಾದ ನ್ಯಾಯಾಧೀಕರಣ ಮುಂದೆ ಇದೆ. ಕಾನೂನು ಬಾಹಿರ ಯಾವುದೇ ಕಾಮಗಾರಿ ಮಾಡಿಲ್ಲ. ಪಾರದರ್ಶಕವಾಗಿದ್ದೇವೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಠ ಹಿಡಿದು ಭಕ್ತರಿಗೆ ದರ್ಶನ ನೀಡಿದ ಶಿವಕುಮಾರ ಸ್ವಾಮೀಜಿ