Select Your Language

Notifications

webdunia
webdunia
webdunia
webdunia

ಮಹಾದಾಯಿ ವಿಚಾರದಲ್ಲಿ ಓಟ್‌ ಬ್ಯಾಂಕ್‌ ರಾಜಕಾರಣ– ಅಣ್ಣಾ ಹಜಾರೆ

ಮಹಾದಾಯಿ
ಕಲಬುರ್ಗಿ , ಭಾನುವಾರ, 28 ಜನವರಿ 2018 (20:34 IST)
ಮಹಾದಾಯಿ ವಿಚಾರದಲ್ಲಿ ಎಲ್ಲ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಕಿಸಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ಪಕ್ಷಕ್ಕಾಗಿ ಚಿಂತನೆ ಮಾಡುತ್ತಿದ್ದಾರೆ. ಆದರೆ, ದೇಶಕ್ಕಾಗಿ ಚಿಂತನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಮಹಾದಾಯಿ ಒಂದೇಯಲ್ಲ ದೇಶದ ಅನೇಕ ನದಿಗಳ ವಿಷಯದಲ್ಲಿ ಜಗಳವಿದೆ. ಆದರೆ, ಈ ವಿಷಯವನ್ನು ರಾಜಕೀಯ ಪಕ್ಷಗಳು ಓಟು ಬ್ಯಾಂಕಿಗೆ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
 
ಗೋವಾ ಹಾಗೂ ಕರ್ನಾಟಕದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿ ಇರುವುದರಿಂದ ಸಮಸ್ಯೆ ಜಟೀಲವಾಗಿದೆ. ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ನಿಯೋಗ ಕದ್ದುಮುಚ್ಚಿ ಭೇಟಿ ನೀಡಿದ್ದು ಸರಿಯಲ್ಲ– ಜಾರಕಿಹೊಳಿ