ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಜೆಇಇ ಮೈನ್ಸ್ 2 ರ ಫಲಿತಾಂಶವನ್ನು ನಾಳೆ ಪ್ರಕಟಿಸಲಿದೆ. ಪರೀಕ್ಷಾ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ, ಎಲ್ಲಿ ಇಲ್ಲಿದೆ ವಿವರ.
https://jeemain.nta.nic.in/ ವೆಬ್ ಸೈಟ್ ನಲ್ಲಿ ಆನ್ ಲೈನ್ ಮುಖಾಂತರ ಪರೀಕ್ಷೆ ಫಲಿತಾಂಶ ವೀಕ್ಷಿಸಬಹುದಾಗಿದೆ. ನಾಳೆ ಅಂದರೆ ಏಪ್ರಿಲ್ 19 ರ ಅಪರಾಹ್ನ 2 ಗಂಟೆಗೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಇಂದು 2 ಗಂಟೆ ಬಳಿಕ ಕೆಲವು ಸಮಯದವರೆಗೆ ಫೈನಲ್ ಆನ್ಸರ್ ಕೀ ಪ್ರಕಟವಾಗಲಿದ್ದು ಕೆಲವು ಸಮಯದ ಬಳಿಕ ವೆಬ್ ಸೈಟ್ ನಿಂದ ಇದನ್ನು ತೆಗೆಯಲಾಗುತ್ತದೆ. ವಿದ್ಯಾರ್ಥಿಗಳು ಫೈನಲ್ ಆನ್ಸರ್ ಕೀ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೇಲೆ ಹೇಳಿದ ವೆಬ್ ಸೈಟ್ ಗೆ ಹೋಗಿ ಅಭ್ಯರ್ಥಿಗಳು ತಮ್ಮ ಹೆಸರು, ಅರ್ಜಿ ಸಂಖ್ಯೆ, ಜನ್ಮದಿನಾಂಕ ನಮೂದಿಸಿ ಫಲಿತಾಂಶ ಪಡೆಯಬಹುದಾಗಿದೆ. ಐಐಐಟಿ, ಎನ್ಐಐಟಿ ಮತ್ತು ಇತರ ಸಂಸ್ಥೆಗಳಲ್ಲಿ ಪದವಿಪೂರ್ವ ಎಂಜಿನಿಯರಿಂಗ್, ವಾಸ್ತುಶಿಲ್ಪ, ಯೋಜನಾ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಜೆಇಇ ಪರೀಕ್ಷೆಯಲ್ಲಿ ಏಪ್ರಿಲ್ 2 ರಿಂದ 9 ರವರೆಗೆ ನಡೆಸಲಾಯಿತು.
ಮೊದಲು ಜೆಇಇ ಮುಖ್ಯಪತ್ರಿಕೆ 1 ಫಲಿತಾಂಶ ಪ್ರಕಟಿಸಲಾಗುತ್ತದೆ. ಇದೀಗ ಪತ್ರಿಕೆ 2 ಫಲಿತಾಂಶ ಪ್ರಕಟಿಸಲಾಗುತ್ತಿದೆ. ಜೆಇಇ 1 ರ ಉತ್ತರ ಕೀಗಳನ್ನು ನೀಡಲಾಗಿತ್ತು. ಬಳಿಕ ಅದನ್ನು ವೆಬ್ ಸೈಟ್ ನಿಂದ ತೆಗೆದು ಹಾಕಲಾಗಿತ್ತು.