Select Your Language

Notifications

webdunia
webdunia
webdunia
webdunia

Jabalpur: ದೇವರ ಬಾಯಿಗೆ ಸಿಗರೇಟು ಇಟ್ಟ ಯುವಕ: ವಿಡಿಯೋ ವೈರಲ್

Kaal Bhairav

Krishnaveni K

ಬೆಂಗಳೂರು , ಶನಿವಾರ, 30 ನವೆಂಬರ್ 2024 (14:28 IST)
ಬೆಂಗಳೂರು: ಇತ್ತೀಚೆಗೆ ದೇವರ ಹೆಸರಿನಲ್ಲಿ ವಿಕೃತಿ ಮೆರೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಮಧ್ಯಪ್ರದೇಶದಲ್ಲಿ ಯುವಕನೊಬ್ಬ ದೇವರ ಮೂರ್ತಿಯ ಬಾಯಿಗೆ ಸಿಗರೇಟು ಇಟ್ಟು ವಿಕೃತಿ ಮೆರೆದ ವಿಡಿಯೋವೊಂದು ವೈರಲ್ ಆಗಿದೆ.

SumitKumar78276 ಎಂಬವರು ತಮ್ಮ ಖಾತೆಯಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಮಧ್ಯಪ್ರದೇಶ ಜಬಾಲ್ ಪುರ್ ನಲ್ಲಿ ಘಟನೆ ನಡೆದಿರುವುದಾಗಿ ಹೇಳಿದ್ದಾರೆ. ಕಾಲಭೈರವೇಶ್ವರ ಸ್ವಾಮಿಯ ಮೂರ್ತಿಯ ಬಾಯಿಗೆ ಯುವಕ ಸಿಗರೇಟು ಇಡುತ್ತಾನೆ.

ಈ ವಿಡಿಯೋ ನೋಡಿ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲಭೈರವ ಮೂರ್ತಿಯ ಬಾಯಿಗೆ ಸಿಗರೇಟು ಇಟ್ಟು ಯುವಕ ಶ್ರೀ ಕಾಲಭೈರವ ಮಂದಿರದ ವಿಳಾಸ ಹೇಳಿ ಇದು ಕಾರಣಿಕ ದೇವರಾಗಿದ್ದು, ಇಲ್ಲಿ ಬಂದು ಸಿಗರೇಟು ನೀಡಿದರೆ ನಿಮ್ಮ ಮನೋಕಾಮನೆ ಪೂರೈಸುತ್ತದೆ ಎನ್ನುತ್ತಾನೆ.

ಈ ವಿಡಿಯೋ ಮಾಡಿದವರು ಯಾರು ಎಂದು ಸ್ಪಷ್ಟವಾಗಿಲ್ಲ. ಆದರೆ ಈ ಬಗ್ಗೆ ಭಕ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.  ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದ್ದು ಸದ್ಯದಲ್ಲೇ ಆರೋಪಿಯನ್ನು ಅರೆಸ್ಟ್ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಂಗಾಪುರದಲ್ಲಿ ಪತ್ನಿಗೆ ಚಿನ್ನದ ಸರ ಖರೀದಿಸಿದ್ದ ತಮಿಳುನಾಡಿನ ವ್ಯಕ್ತಿಗೆ ಲಕ್ಕಿ ಡ್ರಾದಲ್ಲಿ ₹8 ಕೋಟಿ ಬಹುಮಾನ