Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆ ಶಂಕೆ: ಮಹಿಳೆಯರಿಬ್ಬರನ್ನು ರಸ್ತೆಗೆಳೆದು ಬಟ್ಟೆ ಹರಿದು ಹಲ್ಲೆ

Belgavi Woman Assault

Sampriya

ಬೆಳಗಾವಿ , ಶನಿವಾರ, 16 ನವೆಂಬರ್ 2024 (15:09 IST)
ಬೆಳಗಾವಿ: ಮಹಿಳೆಯರಿಬ್ಬರನ್ನು ರಸ್ತೆಗೆ ಎಳೆದು ಬಟ್ಟೆ ಹರಿದು ಹಲ್ಲೆ ಮಾಡಿದ ಘಟನೆ ಮಾಳಮಾರುತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಂಠ ಅಷ್ಟೇಕರ್ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ.  ಇಲ್ಲಿನ ವಡ್ಡರವಾಡಿ ಪ್ರದೇಶದಲ್ಲಿ ಮಹಿಳೆಯರಿಬ್ಬರನ್ನು ರಸ್ತೆಗೆ ಎಳೆದು ತಂದು ಬಟ್ಟೆ ಹರಿದು ಹಲ್ಲೆ ಮಾಡಿದ ಘಟನೆ ಸೋಮವಾರ ರಾತ್ರಿ 11ಕ್ಕೆ ನಡೆದಿದೆ.  ಶನಿವಾರ ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ವಡ್ಡರವಾಡಿಯ ಮಹಿಳೆಯೊಬ್ಬರನ್ನು ಮಹಾರಾಷ್ಟ್ರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಮನೆಯ ಕಿರುಕುಳದಿಂದ ಮಹಿಳೆ ತಾಯಿ ಜತೆಯಲ್ಲಿ  ವಾಸವಾಗಿದ್ದಾಳೆ. ಅವರ ಪರಿಚಯಸ್ಥರು ಪದೇಪದೇ ಮನೆಗೆ ಬರುತ್ತಿರುವುದನ್ನು ಕಂಡು, ವೇಶ್ಯಾವಾಟಿಕೆ ನಡೆಸುತ್ತಿರುವ ಅನುಮಾನದಿಂದ ಮೂವರೂ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯರು ದೂರಿನಲ್ಲಿ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ತಮ್ಮ ತಾಯಿಯ ಕೂದಲು ಹಿಡಿದು ಹೊರಗೆ ಎಳೆದು ತಂದರು. ನನ್ನನ್ನೂ ಎಳೆದಾಡಿ ಬಟ್ಟೆ ಹರಿದರು. ವಿವಸ್ತ್ರಗೊಳಿಸಿ ಹಲ್ಲೆ ಮಾಡಿದರು ಎಂದೂ ಮಹಿಳೆ ನೀಡಿದ ದೂರಿನಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರು