Publish Date: Sat, 16 Nov 2024 (12:46 IST)
Updated Date: Sat, 16 Nov 2024 (12:48 IST)
ಬೆಂಗಳೂರು: ಚನ್ನಪಟ್ಟಣದಲ್ಲಿ ಈ ಬಾರಿ ಕಾಂಗ್ರೆಸ್ ಸೋತರೆ ಸಚಿವ ಜಮೀರ್ ಅಹ್ಮದ್ ಮೇಲೆ ಶಿಸ್ತು ಕ್ರಮ ಗ್ಯಾರಂಟಿ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆ ಈಗ ಸೋಲಿನ ಭಯ ಕಾಡಿದೆ. ಇದಕ್ಕೆ ಕಾರಣ ಕುಮಾರಸ್ವಾಮಿ ಬಗ್ಗೆ ಜಮೀರ್ ಅಹ್ಮದ್ ಆಡಿದ್ದ ಕರಿಯಾ ಎನ್ನುವ ಪದ ಬಳಕೆ. ಇದರಿಂದಾಗಿ ಚನ್ನಪಟ್ಟಣದಲ್ಲಿ ಒಕ್ಕಲಿಗರ ಮತಗಳು ಕಾಂಗ್ರೆಸ್ ಗೆ ಉಲ್ಟಾ ಹೊಡೆದಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಇದು ನಿಜವಾದರೆ ಯೋಗೇಶ್ವರ್ ಗೆ ಗೆಲುವು ಕಷ್ಟ. ಕುಮಾರಸ್ವಾಮಿಯವರ ಬಗ್ಗೆ ಜಮೀರ್ ಹೇಳಿಕೆ ಕಾಂಗ್ರೆಸ್ ನಾಯಕರೊಳಗೇ ಅಸಮಾಧಾನ ತಂದಿದೆ. ಇದು ಪಕ್ಷಕ್ಕೆ ಡ್ಯಾಮೇಜ್ ತರುತ್ತದೆ ಎನ್ನುವಾಗ ಜಮೀರ್ ಕೈಯಲ್ಲಿ ಕ್ಷಮೆ ಕೂಡಾ ಕೇಳಿಸಿದ್ದಾಗಿದೆ.
ಆದರೆ ಈಗ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಕರಿಯಾ ಎಂದು ಜಮೀರ್ ಹೇಳಿದ್ದು ತಪ್ಪು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅವರಿಗೆ ನಾವು ಬುದ್ಧಿ ಹೇಳಿದ್ದೇವೆ ಎಂದಿದ್ದಾರೆ. ಅದರ ಜೊತೆಗೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಬಹಿರಂಗವಾಗಿ ಹೇಳಲ್ಲ ಎಂದಿದ್ದಾರೆ. ಹೀಗಾಗಿ ಒಂದು ವೇಳೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸೋತರೆ ಜಮೀರ್ ವಿರುದ್ಧ ಪಕ್ಷದ ನಾಯಕರು ಮುಗಿಬೀಳುವುದು ಖಚಿತ. ಆಗ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಂತೂ ಇದೆ.