Select Your Language

Notifications

webdunia
webdunia
webdunia
webdunia

ಬಸ್ ಕಂಡಕ್ಟರ್ ಮೇಲೆ ಹಳೇ ಸೇಡು, ಇಟ್ಟಿಗೆ ತೆಗೆದು ಎಸೆದೇ ಬಿಟ್ಟ ಪ್ರಯಾಣಿಕ: ವಿಡಿಯೋ ವೈರಲ್

BMTC Bus Pass Fight, BMTC Viral Video, Attack On BMTC Bus Conducter,

Sampriya

ಬೆಂಗಳೂರು , ಶುಕ್ರವಾರ, 25 ಅಕ್ಟೋಬರ್ 2024 (16:53 IST)
Photo Courtesy X
ಬೆಂಗಳೂರು: ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ಕೋಪಗೊಂಡ ಪ್ರಯಾಣಿಕನೊಬ್ಬ ಕಲ್ಲಿನಿಂದ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧ್ಯಾಹ್ನ ವೇಳೆ ಊಟ ಮಾಡುತ್ತಿದ್ದ ಸರ್ಕಾರಿ ಬಸ್ ಕಂಡಕ್ಟರ್ ಸಂಗಪ್ಪ ಚಿತ್ತಲಗಿ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ.

ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಮಧ್ಯಾಹ್ನದ ವೇಳೆ ಬಸ್‌ನಲ್ಲಿ ಊಟ ಸೇವಿಸುತ್ತಿದ್ದ ಕಂಡಕ್ಟರ್ ಮೇಲೆ  ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಆರೋಪಿಯನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಲಾಗಿದೆ. ಇನ್ನೂ ಈ ಹಲ್ಲೆಗೆ  ಬಸ್ ಪಾಸ್ ವಿಚಾರವಾಗಿ ಕಂಡಕ್ಟರ್ ಹಾಗೂ ಆರೋಪಿ ನಡುವೆ ನಡೆದ ಗಲಾಟೆ ಕಾರಣ ಎನ್ನಲಾಗಿದೆ.

ಘಟನೆಯ ಮೂರು ದಿನಗಳ ಹಿಂದೆ ಕಂಡಕ್ಟರ್ ಹಾಗೂ ಪ್ರಯಾಣಿಕ ನಡುವೆ ಜಗಳ ನಡೆದಿದೆ. ಸೇಡು ತೀರಿಸಿಕೊಳ್ಳುವ ಸಲುವಾಗಿ ಪ್ರಯಾಣಿಕ ಇದೀಗ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವುದಾಗಿ ಒ‍ಪ್ಪಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ನಿಯಮ ಉಲ್ಲಂಘಿಸಿದ್ದೂ ಅಲ್ಲದೆ ಪೊಲೀಸರಿಗೇ ಧಮ್ಕಿ ಹಾಕಿದ ಮಹಿಳೆ ವಿಡಿಯೋ