ಬೆಂಗಳೂರು: ಹಾಡಹಗಲೇ ಕರ್ತವ್ಯ ನಿರತ ಪೊಲೀಸ್ ಮೇಲೆ ಮಹಿಳೆಯೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ ಈ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ಮಹಿಳೆಯನ್ನು ಪ್ರಶ್ನಿಸಿದಕ್ಕೆ ಕೋಪಗೊಂಡು ಏಕಾಏಕಿ ಪೊಲೀಸರ ಮೇಲೆ ರೇಗಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಟ್ರಾಫಿಕ್ ಪೊಲೀಸ್ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲರ್ ಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿದ್ದಾಳೆ.
ಅಲ್ಲೇ ಇದ್ದ ಸ್ಥಳೀಯರೊಬ್ಬರು ಇದನ್ನು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. ಅಲ್ಲೇ ಇದ್ದ ಪೊಲೀಸರು ಕೂಡಾ ಮಹಿಳೆಯನ್ನು ತಡೆಯುವ ಕೆಲಸವನ್ನು ಮಾಡಿಲ್ಲ.
ಇದನ್ನು ನೋಡಿದದವರ ಆತ್ಮೀಯ @BlrCityPolice ಬಿಮರುಲ್ಯಾಂಡ್ನ ಈ ವಲಸಿಗರ ವಿರುದ್ಧ ನೀವು ಕ್ರಮ ಕೈಗೊಳ್ಳಲು ಧೈರ್ಯ ಮಾಡುತ್ತೀರಾ ಅಥವಾ ನಿಮ್ಮ ಧೈರ್ಯ ಮತ್ತು ಕ್ರಮ ಬಡ ಕನ್ನಡಿಗ ಆಟೋ ಚಾಲಕರ ವಿರುದ್ಧ ಮಾತ್ರನ ಎಂದು ಪ್ರಶ್ನೆ ಮಾಡಿದ್ದಾರೆ.