Select Your Language

Notifications

webdunia
webdunia
webdunia
webdunia

ಬೆನ್ನುನೋವು ಎಂದು ಆಸ್ಪತ್ರೆ ಸೇರಿದ್ದ ದರ್ಶನ್ ಆಸ್ಪತ್ರೆಯೊಳಗೆ ಹೇಗಿದ್ದಾರೆ: ವಿಡಿಯೋ ನೋಡಿ ಶಾಕ್ ಆಗ್ತೀರಿ

Darshan
ಬೆಂಗಳೂರು: ಆರಡಿ ಎತ್ತರದ ಆಜಾನುಬಾಹುವಿನಂತಿದ್ದ ದರ್ಶನ್ ರಾಜಠೀವಿಯಿಂದ ಓಡಾಡುತ್ತಿದ್ದರು. ಆದರೆ ಈಗ ಬೆನ್ನು ನೋವಿನಿಂದ ಕುಗ್ಗಿ ಹೋಗಿರುವ ಅವರು ನಡೆದಾಡಲೂ ಇನ್ನೊಬ್ಬರ ಸಹಾಯ ಬೇಕು. ವಿಡಿಯೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಇದೀಗ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ದರ್ಶನ್ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ನೋವಿನ ತೀವ್ರತೆ ಎಷ್ಟಿದೆಯೆಂದರೆ ಅವರಿಗೆ ನಡೆದಾಡಲೂ ಕಷ್ಟವಾಗುತ್ತಿದೆ ಎನ್ನಲಾಗಿದೆ.

ಇದೀಗ ಅವರಿಗೆ ನೆರಳಿನಂತೆ ನಟ ಧನ್ವೀರ್ ಆಸ್ಪತ್ರೆಯಲ್ಲಿದ್ದಾರೆ. ದರ್ಶನ್ ಗೆ ಈಗ ಕಾಲು ನೋವು ಹೆಚ್ಚಾಗಿದ್ದು ಏಕಾಂಗಿಯಾಗಿ ನಡೆದಾಡಲೂ ಕಷ್ಟವಾಗಿದೆ. ಹೀಗಾಗಿ ಅವರು ನಟ ಧನ್ವೀರ್ ಮತ್ತು ಇನ್ನೊಬ್ಬರ ಕೈ ಹಿಡಿದುಕೊಂಡು ನಡೆದಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಜಿಎಸ್ ಆಸ್ಪತ್ರೆಯೊಳಗೆ ಅವರು ನಡೆದಾಡುವ ದೃಶ್ಯ ಇದಾಗಿದೆ. ನೋವಿನಿಂದಾಗಿ ಧನ್ವೀರ್ ಕೈ ಹಿಡಿದುಕೊಂಡು ದರ್ಶನ್ ನಡೆಯುತ್ತಿದ್ದಾರೆ. ಇಂದು ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾ, ಫಿಸಿಯೋಥೆರಪಿ ಸಾಕೇ ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಗೆ ಕನ್ನಡವೇ ಬರೋಲ್ಲ ಎಂದಿದ್ದ, ರಕ್ಷಿತಾಗೆ ಗುರುಪ್ರಸಾದ್ ಕಂಡರೇ ಭಯವಿತ್ತು: ಜಗ್ಗೇಶ್