Select Your Language

Notifications

webdunia
webdunia
webdunia
webdunia

ದರ್ಶನ್ ಗೆ ಪಾಪ ಏನೂ ಗೊತ್ತಿಲ್ಲ, ಬೆರಳು ತೋರಿಸಿದ್ದು ಈ ಕಾರಣಕ್ಕಂತೆ: ಕೆ ಮಂಜು ವಕಾಲತ್ತು

Darshan Middle Finger

Sampriya

ಬೆಂಗಳೂರು , ಶುಕ್ರವಾರ, 13 ಸೆಪ್ಟಂಬರ್ 2024 (16:40 IST)
Photo Courtesy X
ಬೆಂಗಳೂರು: ದರ್ಶನ್‌ಗೆ ಕೈ ನೋವಾಗಿ ಆ ರೀತಿ ಮಾಡಿರಬಹುದು. ಆತ ಅಮಾಯಕ. ಮಾಧ್ಯಮಗಳು ಯಾಕೆ ಅವರ ಪ್ರತಿಯೊಂದು ವಿಚಾರದಲ್ಲೂ ತಪ್ಪು ಕಂಡುಹಿಡಿಯಲಿಕ್ಕೆ ಹೋಗುತ್ತದೆ ಎಂದು ನಿರ್ಮಾಪಕ ಕೆ ಮಂಜು ಹೇಳಿದರು.

ಗುರುವಾರ ಬಳ್ಳಾರಿ ಜೈಲಿನಲ್ಲಿ ದರ್ಶನ್ ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದರು. ಈ ವಿಚಾರವಾಗಿ ಕೆ ಮಂಜು ಬಳಿ ಖಾಸಗಿ ಮಾಧ್ಯಮವೊಂದು ಪ್ರಶ್ನಿಸಿದಾಗ , ಆತ ಬೇಲ್ ಆಗಿಲ್ಲ ಎಂಬ ಕಾರಣಕ್ಕೆ ಆ ರೀತಿ ವರ್ತಿಸಿರಬಹುದು. ಕೈ ನೋವಾಗಿಯೂ ಇರಬಹುದು, ಯಾರಿಗೆ ಗೊತ್ತು ಎಂದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಯಾರಾದರು ತಪ್ಪು ಮಾಡಿದ್ರೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ. ದರ್ಶನ್ ಆರೋಪಿ, ಅಪರಾಧಿಯಲ್ಲ. ಇಂದು ಅವರು ಮಾಡಿರುವ ಒಳ್ಳೆಯ ಕೆಲಸಗಳು ಗೊತ್ತಾಗ್ತಿಲ್ಲ. ದರ್ಶನ್‌ ತುಂಬಾನೇ ಒಳ್ಳೆಯ ವ್ಯಕ್ತಿಯಾಗಿದ್ದು,  ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ. ಇಂದು ಆತನಿಗೆ ಸುಮ್ಮನೇ ಅಭಿಮಾನಿಗಳಿಲ್ಲ. ಅವನು ಮಾಡುವ ದಾನ ಧರ್ಮ, ಒಳ್ಳೆಯ ಮನಸ್ಸಿನಿಂದಾಗಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೆ.17ರ ವರೆಗೆ ದರ್ಶನ್ ಸೇರಿದಂತೆ ಡಿ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ