Publish Date: Wed, 26 Jan 2022 (13:09 IST)
Updated Date: Wed, 26 Jan 2022 (16:13 IST)
ಹೈದರಾಬಾದ್ : ವ್ಯಾಯಾಮ ಮಾಡಿದ್ದು ಸಾಕು ನಿಲ್ಲಿಸು ಎಂದು ಹೇಳಿದ್ದ ತಾಯಿಯನ್ನು ಹೊಡೆದು ಕೊಂದಿರುವ ಘಟನೆ ಹೈದರಾಬಾದ್ನ ಸುಲ್ತಾನ್ ಬಜಾರ್ನಲ್ಲಿ ನಡೆದಿದೆ.
24 ವರ್ಷದ ಕೊಂಡಾ ಸುಧೀರ್ ಕುಮಾರ್ ಆರೋಪಿಯಾಗಿದ್ದಾನೆ. ಕೊಂಡಾ ಪಾಪಮ್ಮ ಮೃತ ತಾಯಿ. ಸುಧೀರ್ ಕುಮಾರ್ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಅಸ್ವಸ್ಥ ಎನ್ನಲಾಗಿದೆ. ತಾಯಿಯನ್ನು ಹೊಡೆದು ಕೊಂದು ಪೊಲೀಸರ ವಶದಲ್ಲಿದ್ದಾನೆ.
ಜನವರಿ 24ರ ತಡರಾತ್ರಿ 2 ಗಂಟೆ ಹೊತ್ತಿಗೆ ವ್ಯಾಯಾಮ ಮಾಡುತ್ತಿದ್ದನು. ತಾಯಿ ಸುಧೀರ್ ಕುಮಾರ್ಗೆ ಮಗನನ್ನು ಮಲಗುವಂತೆ ಹೇಳಿದ್ದಾರೆ. ಆದರೆ ಕೋಪಗೊಂಡ ಆತ ಕೈಯಲ್ಲಿ ಹಿಡಿದಿದ್ದ ಡಂಬಲ್ಸ್ನಿಂದ ಆಕೆಗೆ ಹೊಡೆದು ಕೊಂದಿದ್ದಾನೆ.