Select Your Language

Notifications

webdunia
webdunia
webdunia
webdunia

ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಳಸಿದ ವಸ್ತುಗಳ ಅರಾಜು?

ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಳಸಿದ ವಸ್ತುಗಳ ಅರಾಜು?
ಚೆನ್ನೈ , ಸೋಮವಾರ, 27 ಜೂನ್ 2022 (14:34 IST)
ಚೆನ್ನೈ : ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಅಕ್ರಮ ಆಸ್ತಿ ಜಪ್ತಿ ಮಾಡಿ 26 ವರ್ಷ ಆಗುತ್ತಿದೆ.

ಕರ್ನಾಟಕದ ಖಜಾನೆಯಲ್ಲಿ ಈಗಲೂ ಸೀರೆ, ಚಪ್ಪಲಿ, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳಿವೆ. ಈಗ ಜಯಲಲಿತಾ ಅವರ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಇಡಬೇಕು ಅಂತಾ ಕರ್ನಾಟಕದ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.

ದಿವಂಗತ ಜಯಲಲಿತಾ ಅವರ ಸೀರೆ, ಚಪ್ಪಲಿ ಎಷ್ಟು ಇತ್ತು? ಹರಾಜಿಗೆ ಇಟ್ಟರೆ ಏನು ಅನುಕೂಲ ಆಗುತ್ತದೆ ಈ ಎಲ್ಲದರ ಮಾಹಿತಿ ಈ ಕೆಳಗಿನಂತಿದೆ.

ವಿಧಾನಸೌಧದ ಖಜಾನೆಯಲ್ಲಿ ಜಯಲಲಿತಾರ 11,344 ಸೀರೆ, 750 ಜೊತೆ ಚಪ್ಪಲಿ ಮತ್ತು ೨೫೦ ಶಾಲುಗಳು 26 ವರ್ಷಗಳಿಂದ ಕೊಳೆಯುತ್ತಿವೆ. ಇದನ್ನು ಹಾಗೇ ಬಿಟ್ಟರೆ ನ್ಯಾಷನಲ್ ವ್ಯರ್ಥ ಆಗುತ್ತದೆ.

ಇದನ್ನು ಹರಾಜಿಗೆ ಇಟ್ಟರೆ ಅವರ ಅಭಿಮಾನಿಗಳು ಒಂದು ಸಾವಿರ ಅಥವಾ ಹತ್ತು ಸಾವಿರ ಕೊಟ್ಟು ಕೊಂಡುಕೊಳ್ಳುತ್ತಾರೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಏಕೆಂದರೆ ಜಯಲಲಿತಾ ಅವರು ಬದುಕಿಲ್ಲ. ಕೇಸ್ ಇದ್ದರೂ ಕೂಡ ಅವರಿಲ್ಲದ ಕಾರಣ ಏನು ಆಗುವುದಿಲ್ಲ.

ಅವರ ಸೀರೆ, ಚಪ್ಪಲಿ, ಶಾಲು ಹರಾಜಿಗೆ ಇಟ್ಟರೆ ಪ್ರಯೋಜನಕ್ಕೆ ಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸವಣ್ಣನವರ ಪಠ್ಯವನ್ನು ಸರಿಪಡಿಸಲಾಗುವುದು : ನಾಗೇಶ್