Publish Date: Thu, 23 Jun 2022 (11:43 IST)
Updated Date: Thu, 23 Jun 2022 (11:45 IST)
ಚೆನ್ನೈ : ತಮಿಳುನಾಡಿನ ಒಪ್ಪಿಗೆ ಇಲ್ಲದೇ ಕರ್ನಾಟಕ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಆಗದು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ತಮಗೆ ತಿಳಿಸಿದ್ದಾರೆ ಎಂದು ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈಮುರುಗನ್ ಹೇಳಿದ್ದಾರೆ.
ಮೇಕೆದಾಟುವಿನಲ್ಲಿ ಕರ್ನಾಟಕ ಸರ್ಕಾರ ನಿರ್ಮಾಣ ಮಾಡಲು ಚಿಂತಿಸಿರುವ ಅಣೆಕಟ್ಟು ಯೋಜನೆಗೆ ತಮಿಳುನಾಡಿನ ಹಿತದೃಷ್ಟಿಯಿಂದ ಅವಕಾಶ ನೀಡಬಾರದು ಎಂದು ಕೋರಿ ತಮಿಳುನಾಡಿನ ಶಾಸಕರ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಬುಧವಾರ ಮನವಿ ಮಾಡಿತು.
ಅಲ್ಲದೆ ಕಾವೇರಿ ನೀರು ನಿರ್ವಹಣಾ ಮಂಡಳಿ ಮೇಕೆದಾಟು ಅಣೆಕಟ್ಟು ಕುರಿತಾಗಿ ಚರ್ಚೆ ನಡೆಸದಂತೆ ಶೆಖಾವತ್ ಅವರು ಸೂಚನೆ ನೀಡಬೇಕು.