Select Your Language

Notifications

webdunia
webdunia
webdunia
webdunia

ಮೇಕೆದಾಟು ವಿರುದ್ಧ ಸುಪ್ರೀಂನಲ್ಲಿ ಹೋರಾಟ: ಸ್ಟಾಲಿನ್

ಮೇಕೆದಾಟು ವಿರುದ್ಧ ಸುಪ್ರೀಂನಲ್ಲಿ ಹೋರಾಟ: ಸ್ಟಾಲಿನ್
bengaluru , ಶನಿವಾರ, 18 ಜೂನ್ 2022 (18:25 IST)
ಕರ್ನಾಟಕ ಕೈಗೆತ್ತಿಕೊಂಡಿರುವ ಮೇಕೆದಾಟು ಯೋಜನೆ ವಿರೋಧಿಸಿ ನಾವು ಸುಪ್ರೀಂಕೋರ್ಟ್‌ ನಲ್ಲಿ ಹೋರಾಟ ಮಾಡಲಿದ್ದೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಶುಕ್ರವಾರವಷ್ಟೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿ ರಾಜ್ಯದ ಹಲವು ನೀರಾವರಿ ಯೋಜನೆಗಳ ಕುರಿತು ಮಾತುಕತೆ ನಡೆಸಿರುವ ಬೆನ್ನಲ್ಲೇ ತಮಿಳುನಾಡು ಹೊಸ ವರಸೆ ತೆಗೆದಿದೆ.
ಇತ್ತೀಚಿಗೆ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಬೆಯಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆ ಕುರಿತು ಚರ್ಚಿಸಲು ಮುಂದಾಗಿರುವುದು ಆಘಾತಕಾರಿ ಹಾಗು ಕಾನೂನುಬಾಹಿರ ಕ್ರಮ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಿಡಿಕಾರಿದ್ದಾರೆ.
ಕಾವೇರಿ ನೀರಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಯಾವುದೇ ಕಾರಣಕ್ಕು ಬಿಡುವುದಿಲ್ಲ ಕರ್ನಾಟಕದ ಯೋಜನೆ ವಿರುದ್ದ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ನೇತೃತ್ವದಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ರನ್ನು ಭೇಟಿ ಮಾಡಿದ ತಮಿಳುನಾಡು ನಿಯೋಗ ಕಾವೇರಿ ನದಿ ನೀರು ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ನೀಡಿರುವ ಹೇಳಿಕೆಯಿಂದ ರೈತರಿಗೆ ಹಾಗು ನಾಡಿನ ಜನರಿಗೆ ಆಗಿರುವ ನೋವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿದು ಬಂದಿದೆ.
ಶುಕ್ರಾವರ ತಂಜಾವೂರಿನಲ್ಲಿರುವ ಕಲ್ಲನೈ ಅಣ್ಣೆಕಟ್ಟು ವೀಕ್ಷಿಸಿದ ನಂತರ ತಮಿಳುನಾಡಿನ ಆಕ್ಷೇಪಣೆಯ ಹೊರತಾಗಿಯು ಪ್ರಾಧಿಕಾರಕ್ಕೆ ಮೇಕೆದಾಟು ಅಣೆಕಟ್ಟಿನ ಬಗ್ಗೆ ಚರ್ಚಿಸಲು ಅಧಿಕಾರವಿದೆ ಎಂದು ಹೇಳಿದ್ದರು.
ಈ ವಿಚಾರ ಇನ್ನು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವಾಗ ಇದನ್ನು ಪ್ರಾಧಿಕಾರ ಚರ್ಚಿಸಲು ಹೇಗೆ ಸಾಧ್ಯ ಈ ವಿಚಾರ ಗೊತ್ತಿದರು ಸಹ ಅಧ್ಯಕ್ಷರು ವಿಷಯ ಪ್ರಸ್ತಾಪಿಸಿಉವುದಾಗಿ ಹೇಳಿರುವುದು ಕಾನೂನು ಬಾಹಿರ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಪ್ರತಾಪ್‌ ಸಿಂಹ, ಸೋಮಶೇಖರ್‌ ವಿರುದ್ಧ ದೂರು!