ಮಡಿಕೇರಿ : ಪಠ್ಯ ಪುಸ್ತಕ ಪರಿಷ್ಕರಣೆಗೆ ಮತ್ತೊಂದು ಸಮಿತಿ ಮಾಡುವ ವಿಚಾರ ಹಿನ್ನೆಲೆಯಲ್ಲಿ ಅಂತಹ ಯಾವುದೇ ನಿರ್ಧಾರ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದರು.
ಕೊಡಗಿನ ಕುಶಾಲನಗರದಲ್ಲಿ ಮಾತಾನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಡಯಟ್ ಪ್ರಾಂಶುಪಾಲರು ಮತ್ತು ಶಿಕ್ಷಕರ ನೇತೃತ್ವದಲ್ಲಿ ಬಸವಣ್ಣನವರ ಪಠ್ಯವೊಂದನ್ನು ಮಾತ್ರ ಸರಿಪಡಿಸಲಾಗುವುದು.
ಉಳಿದಂತೆ ಎಲ್ಲವೂ ಹಾಗೆಯೇ ಮುಂದುವರಿಯಲಿದೆ. ಈಗಾಗಲೇ ರಾಜ್ಯದಲ್ಲಿ ಶೇ 80% ವಿದ್ಯಾರ್ಥಿಗಳಿಗೆ ಪುಸ್ತಕ ವಿಸ್ತರಣೆ ಆಗಿದೆ. ಕಲಿಕಾ ಚೇತರಿಕೆ ಆದ ಬಳಿಕ ಎಂದಿನಂತೆ ಪಾಠಗಳು ನಡೆಯಲಿವೆ ಎಂದು ತಿಳಿಸಿದರು.