Publish Date: Fri, 17 Jun 2022 (15:17 IST)
Updated Date: Fri, 17 Jun 2022 (17:19 IST)
ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶವನ್ನು ನಾಳೆ (ಜೂ.18) ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ಬಿ.ಸಿ.ನಾಗೇಶ್ ಅವರು ಟ್ವೀಟ್ ಮಾಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.
6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಆಗಿದ್ದರು. ಅವರಲ್ಲಿ 3,46,936 ವಿದ್ಯಾರ್ಥಿಗಳು ಹಾಗೂ 3,37,319 ವಿದ್ಯಾರ್ಥಿನಿಯರು ಆಗಿದ್ದಾರೆ. ರಾಜ್ಯದ 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಶಿಕ್ಷಣ ಸಚಿವರ ಸುದ್ದಿಗೋಷ್ಠಿ ಬಳಿಕ ಇಲಾಖೆ ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಲಿದೆ.