ಏಪ್ರಿಲ್ 22 ರಿಂದ ಮೇ 18ರವರೆಗೆ 2021-22ನೇ ಸಾಲಿನ ಪಿಯುಸಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಸುಸೂತ್ರವಾಗಿ ಮಾಡಿಮುಗಿಸಿದೆ. ಪರೀಕ್ಷೆ ಮುಗಿದು ತಿಂಗಳು ಕಳೆದರು ಇನ್ನೂ ಫಲಿತಾಂಶ ಮಾತ್ರ ಬಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪೊಷಕರು ಆತಂಕಕೊಳಗಾಗಿದ್ದಾರೆ. ಜೂನ್ 20 ರಿಂದ 25 ರೊಳಗೆ ಫಲಿತಾಂಶವನ್ನು ಪುಕಟ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ, ಶಿಕ್ಷಣ ಸಚಿವರು ಸುದ್ದಿ ಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಜೂನ್ 15 ರೊಳಗೆ ಫಲಿತಾಂಶವನ್ನು ಪುಕಟ ಮಾಡಲು ಶಿಕ್ಷಣ ಇಲಾಖೆ ಎಲ್ಲಾ ತಯಾರಿಯನ್ನು ಮಾಡಿಕೊಂಡಿತ್ತು. ಆದರ ಮೌಲ್ಯಮಾಪನಕ್ಕೆ ನೋಂದಣಿ ಮಾಡಿಕೊಂಡ ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳದ ಕಾರಣ ಫಲಿತಾಂಶ ಪುಕಟದಲ್ಲಿ ವಿಳಂಭವಾಗಿದ. ಇದರ ಮಧ್ಯೆ ಸಾಲು ಸಾಲು ರಜೆಗಳು ಬಂದಿದ್ದು, ಸಮಯಕ್ಕೆ ಸರಿಯಾಗಿ ಮೌಲ್ಯಮಾಪನ ಕಾರ್ಯ ಮಾಡಿ ಮುಗಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.