Select Your Language

Notifications

webdunia
webdunia
webdunia
webdunia

ದ.ಪ.ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ

ದ.ಪ.ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ
bangalore , ಮಂಗಳವಾರ, 14 ಜೂನ್ 2022 (20:03 IST)
ನಿನ್ನೆ ನಡೆದ ವಿಧಾನಪರಿಷತ್  ನಾಲ್ಕು ಸ್ಥಾನಗಳ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಿನ್ನೆ ಮತದಾನ ನಡೆದಿದ್ದು ನಾಳೆ ಫಲಿತಾಂಶ ಹೊರಬೀಳಲಿದೆ. ದಕ್ಷಿಣ ಪದವೀಧರರ ಚುನಾವಣೆ ಮತ ಎಣಿಕೆಗೆ ಸಜ್ಜಾಗಿದ್ದು ಈ ಕುರಿತು ಇಂದು ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಪ್ರಕಾಶ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
 
ನಾಳೆ ಬೆಳಿಗ್ಗೆ 8ರಿಂದ ಮತ ಎಣಿಕೆ ಪ್ರಾರಂಭವಾಗಲಿದೆ. ಮೊದಲ ಪ್ರಾಶಸ್ತ್ಯ  ಮತ ಎಣಿಕೆ ಮುಗಿದ ಮೇಲೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು 28 ಟೇಬಲ್ ಗಳ ಅಳವಡಿಕೆ ಮಾಡಲಾಗಿದ್ದು  ಪ್ರತಿ ಟೇಬಲ್ ಗೂ ಇಬ್ಬರು ಮೇಲ್ವಿಚಾರಕರು, ಇಬ್ಬರು ಸಹಾಯಕರಂತೆ 90 ಸಿಬ್ಬಂದಿ ನೇಮಕ ಮಾಡಲಾಗಿದೆ. 245 ಅಂಚೆ ಮತಗಳು ಇದೆ. ಈ ಪೈಕಿ ಎಷ್ಟು ಚಲಾವಣೆ  ಆಗಿದೆ ಎಂಬುದು ನಾಳೆ ಗೊತ್ತಾಗಲಿದೆ ಎಂದರು.
ಅಭ್ಯರ್ಥಿಗಳ ಪರವಾಗಿ ಟೇಬಲ್ ಗೆ ಒಬ್ಬರಂತೆ ಏಜೇಂಟ್ ಗಳನ್ನು ನೇಮಕಗೊಳಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಒಟ್ಟು 158 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.  ಮೊದಲ ಹಂತದಲ್ಲಿ ಮತಗಳನ್ನ ಬಂಡಲ್ ಗಳನ್ನಾಗಿ ಮಾಡಿ 25ರಂತೆ ಬೇರ್ಪಡಿಸಲಾಗುವುದು.ನಾಳೆ ಮಧ್ಯಾಹ್ನದ ನಂತರ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದೆ. ಫಲಿತಾಂಶ ನಾಳಿದ್ದು ಬರುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಆಯುಕ್ತ ಪ್ರಕಾಶ್ ಮಾಹಿತಿ ನೀಡಿದರು.
 
ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದ್ದು, ಭದ್ರತೆಗಾಗಿ 158 ಮಂದಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಮೂವರು ಎಸಿಪಿ, 8 ಪಿ ಐ, 12 ಪಿ ಎಸ್ ಐ, 15 ಎ ಎಸ್ ಐ, 75 ಹೆಚ್ ಸಿ \ಪಿ ಸಿ, 15 ಮಹಿಳಾ ಪಿ ಸಿ, 10 ಕೆ ಎಸ್ ಆರ್ ಪಿ, 20 ಸಿ ಎ ಆರ್ ಸಿಬ್ಬಂದಿ ನೇಮಕ. ಮಾಡಲಾಗಿದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ದು ಬೂಟಾಟಿಕೆಯ ಪ್ರತಿಭಟನೆ : ಆರ್ ಅಶೋಕ್