Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ದು ಬೂಟಾಟಿಕೆಯ ಪ್ರತಿಭಟನೆ : ಆರ್ ಅಶೋಕ್

Congress's hypocritical protest
bangalore , ಮಂಗಳವಾರ, 14 ಜೂನ್ 2022 (19:34 IST)
ಸೋನಿಯಾ ಹಾಗೂ ಕುಟುಂಬದ ಅಕ್ರಮ ಆಸ್ತಿ ರಕ್ಷಿಸಲು ಕಾಂಗ್ರೆಸ್ ಧರಣಿ ನಾಟಕವಾಡುತ್ತಿದೆ. ಕಾಂಗ್ರೆಸ್ ಪಕ್ಷದ ಹೆಸರು ಹಾಳು ಮಾಡುತ್ತಿದ್ದಾರೆ.
 
ಕಾಂಗ್ರೆಸ್ ಪ್ರತಿಭಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್
 
ಸಾವಿರಾರು ಸ್ವಾತಂತ್ರ್ಯ ಹೋರಾಟಗಾರು ಸೇರಿ ಕಟ್ಟಿದ ಸಂಸ್ಥೆ ನ್ಯಾಷನಲ್ ಹೆರಾಲ್ಡ್. ನಂತರ ಬಂದ ಸರ್ಕಾರಗಳು ಪತ್ರಿಕೆಯ ಅಭಿವೃದ್ಧಿಗಾಗಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಭೂಮಿ ನೀಡಿದ್ದಾರೆ. ಅದನ್ನು ಕಬಳಿಸಿ ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಳ್ಳಲು ಹೊರಟ ಸೋನಿಯಾ ಹಾಗೂ ರಾಹುಲ್ ಗಾಂಧಿಯವರ ಮೇಲೆ ನಡೆಯುತ್ತಿರುವ ಕೇಸ್ ಇದು. ಕಾಂಗ್ರೆಸ್ ಪಕ್ಷದ ಮೇಲೆ ಯಾರೂ ಕೇಸ್ ಹಾಕಿಲ್ಲ. ಅಕ್ರಮವಾಗಿ ಗಳಿಸಿದ ಗಾಂಧಿ ಕುಟುಂಬದ ಆಸ್ತಿ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷದ ಹೆಸರನ್ನೇ ಇವರೆಲ್ಲ ಸೇರಿ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗಲೂ CBI, ED ಇತ್ತು. ಅದು ಹೇಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅವರಿಗೆ ಗೊತ್ತು. ಒಬ್ಬ ವ್ಯಕ್ತಿ ಇನ್ನೊಬ್ಬರ ಮೇಲೆ ಕೇಸ್ ದಾಖಲಿಸಿದಾಗ ನೋಟಿಸ್ ನೀಡಿ ವಿಚಾರಣೆ ನಡೆಸುವುದು ಕಾನೂನು ಪ್ರಕ್ರಿಯೆ. ಏನೂ ತಪ್ಪು ನಡೆದಿಲ್ಲ ಎನ್ನುವ ಕಾಂಗ್ರೆಸ್ ಗೆ ಭಯ ಯಾಕೆ?  ಭೀತಿ ಯಾಕೆ? ವೃಥಾ ಕೇಂದ್ರದ ಮೇಲೆ ಆರೋಪ ಯಾಕೆ? ಎಂದು ಮಾರ್ಮಿಕವಾಗಿ ಹೇಳಿದರು. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಏನೂ ತಪ್ಪು ಮಾಡಿರದಿದ್ದರೆ ಭಯ ಯಾಕೆ. ಒಂದು‌ ಕುಟುಂಬ ರಕ್ಷಿಸಲು ಈ ನಾಯಕರು ಕಾಂಗ್ರೆಸ್ ಹೆಸರನ್ನು ಹಾಳು ಮಾಡುತ್ತಿದ್ದಾರೆ.
 
ಕಾಂಗ್ರೆಸ್ ನವರು ಎಮರ್ಜೆನ್ಸಿಗಿಂತ ಇದು ಕೆಟ್ಟದ್ದು. ಈಗಲಾದರೂ ಎಮರ್ಜೆನ್ಸಿ ಹೇರಿದ್ದು ತಪ್ಪು ಎಂದು ಅರ್ಥ ಆದರೆ ಸಾಕು. ಅಧಿಕಾರಕ್ಕಾಗಿ ಮಾಧ್ಯಮಗಳಿಗೆ, ಸಾರ್ವಜನಿಕ ಅಭಿಪ್ರಾಯಕ್ಕೆ ಕಡಿವಾಣ ಹಾಕಿ, ದೇಶವನ್ನೇ ಕತ್ತಲೆಯಲ್ಲಿಟ್ಟ ಸ್ವಾರ್ಥಿಗಳಿಗೆ, ವಿಚಾರಣೆಗೆ ಕರೆದದ್ದು ತಪ್ಪು ಎಂದು ಯಾವ ನೈತಿಕತೆ ಇದೆ ಎಂದು ಖಾರವಾಗಿ ಪ್ರಶ್ನಿಸಿದರು. ಇಂದು ಭಾರತ, ಇಟಲಿ ಅಲ್ಲ. ಇಲ್ಲಿಯ ಕಾನೂನಿಗೆ ಬೆಲೆ ಕೊಡಲೇಬೇಕು. ಹತಾಶೆಯಿಂದ, ರಾಜಕೀಯ ಮಾಡಲು ಪ್ರತಿಭಟನೆ ಮಾಡಿದರೆ ರಾಜ್ಯದ ಜನ ನಿಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸುವ ದಿನ ದೂರವಿಲ್ಲ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶೇಷಾದ್ರಿ ರಸ್ತೆಯಲ್ಲಿ ವೈಟ್ಟಾಪಿಂಗ್ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಮುಕ್ತಾಯ