Select Your Language

Notifications

webdunia
webdunia
webdunia
webdunia

ದೇಶದಲ್ಲಿವೆ 600 ನಕಲಿ ಸಾಲ ನೀಡುವ ಆಪ್: ಆರ್ ಬಿಐ

ದೇಶದಲ್ಲಿವೆ 600 ನಕಲಿ ಸಾಲ ನೀಡುವ ಆಪ್: ಆರ್ ಬಿಐ
bangalore , ಮಂಗಳವಾರ, 14 ಜೂನ್ 2022 (19:06 IST)
ದೇಶದಲ್ಲಿ ಸಾಲ ನೀಡುವ ಮೊಬೈಲ್ ಅಪ್ಲಿಕೇಶನ್‌ಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ, ಅದರಲ್ಲಿ ಕಂಪನಿಗಳು ನೋಂದಣಿ ಮಾಡಿಕೊಂಡಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ.
ಕಂತು ಮರುಪಾವತಿ ಮಾಡದೇ ಇರುವುದು, ಸಮರ್ಪಕವಾಗಿ ಪಾವತಿ ಮಾಡದೇ ಇರುವುದು ಸೇರಿದಂತೆ ನಾನಾ ಕಾರಣಗಳಿಗೆ ಸಾಲ ನೀಡುವ ಮೊಬೈಲ್ ಆಪ್ ಕಂಪನಿಗಳಿಗೆ ತೊಂದರೆ, ಕಿರುಕುಳ ಆಗುತ್ತಿರುವ ಬಗ್ಗೆ ಸಾವಿರಾರು ದೂರುಗಳು ಬಂದಿದ್ದು, ಇವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್ ಸಿಬಿ ನಿರ್ದೇಶಕ ಶಶಿಕಾಂತ್ ದಾಸ್ ಅವರು ತಿಳಿಸಿದ್ದಾರೆ.
ಬ್ಯಾಂಕಿಂಗ್ ನಿಯಮದ ಪ್ರಕಾರ ನೋಂದಣಿ ಮಾಡಿಕೊಳ್ಳಲು ಮೊಬೈಲ್ ಆಪ್ ಅನ್ನು ಅಕ್ರಮ ಎಂದು ಭಾವಿಸಲಾಗಿದೆ. ಇಂತಹ ಮೊಬೈಲ್ ಆಪ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ದೇಶಾದ್ಯಂತ ಒಟ್ಟಾರೆ 2562 ದೂರುಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ 572 ಅತೀ ಹೆಚ್ಚು ದೂರುಗಳು ಬಂದಿವೆ. ಕರ್ನಾಟಕದಲ್ಲಿ 394, ದೆಹಲಿಯಲ್ಲಿ 352, ಮತ್ತು ಹರಿಯಾಣದಲ್ಲಿ 314 ದೂರುಗಳು ದಾಖಲಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರಥೋತ್ಸವ ವೇಳೆ ದುರಂತ: ರಥ ಬಿದ್ದು ಇಬ್ಬರು ಭಕ್ತರ ಸಾವು