Publish Date: Sat, 11 Jun 2022 (10:34 IST)
Updated Date: Sat, 11 Jun 2022 (10:37 IST)
ಬೆಂಗಳೂರು : ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆ ಖಂಡಿಸಿ ನಗರದ ಪ್ರೀಡಂ ಪಾರ್ಕ್ನಲ್ಲಿ ಎಸ್ಡಿಪಿಐ ಸಂಘಟನೆಯ ಪ್ರತಿಭಟನೆಗೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಇಂದು ಪ್ರತಿಭಟನೆ ಮಾಡಲು ಎಸ್ಡಿಪಿಐ ಸಂಘಟನೆ ಅಧ್ಯಕ್ಷ ಸಲೀಂ ಅನುಮತಿ ಕೇಳಿದ್ದರು. ದೇಶದಲ್ಲಾಗುತ್ತಿರೋ ಬೆಳವಣಿಗೆಯಿಂದ ಎಚ್ಚೆತ್ತ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಪ್ರತಿಭಟನೆಗೆ ಸೋಮವಾರದ ನಂತರ ಅನುಮತಿ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.