Publish Date: Mon, 16 Nov 2020 (11:53 IST)
Updated Date: Mon, 16 Nov 2020 (11:55 IST)
ನವದೆಹಲಿ: ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತೀವ್ರಗಾಮಿ ನಾಯಕರ ಪೈಕಿ ಅಗ್ರಸಾಲಿನಲ್ಲಿ ಬರುವ ನೇತಾಜಿ ಸುಭಾಷ್ಚಂದ್ರ ಭೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ ನಲ್ಲಿ ಸ್ಥಾಪಿಸಿ ಎಂದು ಆನ್ ಲೈನ್ ಅಭಿಯಾನವೊಂದು ಆರಂಭವಾಗಿದೆ.
ನಿವೃತ್ತ ಮೇಜರ್ ಜನರಲ್ ಜಿಡಿ ಭಕ್ಷಿ ಸೇರಿದಂತೆ ಅನೇಕರು ಇದನ್ನು ಬೆಂಬಲಿಸಿದ್ದಾರೆ. 2,300 ಕ್ಕೂ ಹೆಚ್ಚು ನೆಟ್ಟಿಗರು ಈ ಆನ್ ಲೈನ್ ಪಿಟೀಷನ್ ಗೆ ಸಹಿ ಮಾಡಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಅಭಿಯಾನ ಮಹತ್ವ ಪಡೆದುಕೊಂಡಿದೆ.