Select Your Language

Notifications

webdunia
webdunia
webdunia
webdunia

ಅಮಾಯಕರು ಸುಳ್ಳು ಪ್ರಕರಣಗಳಿಗೆ ಬಲಿಯಾಗ್ತಿದ್ದಾರೆ : ಹೈಕೋರ್ಟ್

ಅಮಾಯಕರು ಸುಳ್ಳು ಪ್ರಕರಣಗಳಿಗೆ ಬಲಿಯಾಗ್ತಿದ್ದಾರೆ : ಹೈಕೋರ್ಟ್
ತಿರುನಂತರಪುರಂ , ಶುಕ್ರವಾರ, 16 ಡಿಸೆಂಬರ್ 2022 (08:03 IST)
ತಿರುನಂತರಪುರಂ : ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ಎಚ್ಚರಿಕೆಯಿಂದ ವಿಶ್ಲೇಷಣೆ ಮಾಡಬೇಕು ಎಂದು ಕೇರಳ ಹೈಕೋರ್ಟ್ ಸೂಚಿಸಿದೆ.
 
ಅನೇಕ ಅಮಾಯಕರು ಸುಳ್ಳು ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಆದ್ದರಿಂದ ಎಸ್ಸಿ-ಎಸ್ಟಿ ಕಾಯ್ದೆ ಅಡಿಯ ಪ್ರಕರಣಗಳು ಬಂದಾಗ ನ್ಯಾಯಾಲಯಗಳು ಹೆಚ್ಚಿನ ವಿವರಗಳಿಗೆ ಗಮನ ಕೊಡಬೇಕು ಎಂದು ನ್ಯಾಯಮೂರ್ತಿ ಎ. ಬದ್ರುದ್ದೀನ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. 

ಎಸ್ಸಿ-ಎಸ್ಟಿ ಕಾಯ್ದೆ (ದೌರ್ಜನ್ಯ ತಡೆ) ಅಡಿಯಲ್ಲಿ ಅನೇಕ ಮುಗ್ಧರು ಸುಳ್ಳು ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ ಘಟನೆ. ಆದ್ದರಿಂದ ನ್ಯಾಯಾಲಯಗಳು ಪ್ರಕರಣಗಳನ್ನು ಮೂಲದಿಂದ ವಿಶ್ಲೇಷಣೆ ಮಾಡುವ ಅಗತ್ಯವಿದೆ.

ಪ್ರಕರಣದ ಹುಟ್ಟು, ಅಪರಾಧದ ನೋಂದಣಿಯಾಗುವುದಕ್ಕೂ ಮುಂಚಿನ ಪೂರ್ವಕಥೆಗಳು, ದೂರುದಾರ ಮತ್ತು ಆರೋಪಿ ನಡುವಿನ ದ್ವೇಷದ ಅಸ್ತಿತ್ವ ಈ ಎಲ್ಲ ಅಂಶಗಳನ್ನು ಉಲ್ಲೇಖಿಸಬೇಕು. ಜೊತೆಗೆ ಜಾಮೀನು ಅರ್ಜಿ ಪರಿಗಣಿಸುವಾಗ ಹಿಂದಿನ ವಿವಾದಗಳು, ಪ್ರಕರಣಗಳು ಹಾಗೂ ದೂರುಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ದೋಷಿಗೆ ಜಾಮೀನು?