Select Your Language

Notifications

webdunia
webdunia
webdunia
webdunia

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ದೋಷಿಗೆ ಜಾಮೀನು?

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ದೋಷಿಗೆ ಜಾಮೀನು?
ನವದೆಹಲಿ , ಶುಕ್ರವಾರ, 16 ಡಿಸೆಂಬರ್ 2022 (07:19 IST)
ನವದೆಹಲಿ : ಗೋದ್ರಾ ರೈಲು ದಹನಕಾಂಡ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸ್ತಿದ್ದ ಓರ್ವ ಕೈದಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಗೋದ್ರಾ ರೈಲ್ವೇ ನಿಲ್ದಾಣದಲ್ಲಿ ಸಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಕಾರಣ 56 ಕರಸೇವಕರು ಸಜೀವ ದಹನ ಆಗಿದ್ದರು. ಈ ಸಂದರ್ಭದಲ್ಲಿ ಬೋಗಿ ಮೇಲೆ ಕಲ್ಲು ತೂರಿದ್ದ ಫಾರೂಖ್ ಸೇರಿ ಹಲವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಕಳೆದ 17 ವರ್ಷಗಳಿಂದ ಜೈಲಲ್ಲಿದ್ದ ಫಾರೂಖ್ ಸೇರಿ ಹಲವರು ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಸಿಜಿಐ ಚಂದ್ರಚೂಡ್ ನೇತೃತ್ವದ ಪೀಠ, 17 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನ್ನು ಪರಿಗಣಿಸಿ ಫಾರೂಖ್ಗೆ ಜಾಮೀನು ಮಂಜೂರು ಮಾಡಿದೆ. ಉಳಿದವರ ಅರ್ಜಿಗಳ ಬಗ್ಗೆ ಶೀಘ್ರವೇ ನಿರ್ಣಯ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಬಹುನಿರೀಕ್ಷಿತ ಕಾರಂತ ಬಡಾವಣೆ ನಿರ್ಮಾಣಕ್ಕೆ ಚಾಲನೆ