Publish Date: Tue, 16 Jan 2024 (16:44 IST)
Updated Date: Tue, 16 Jan 2024 (13:53 IST)
ಮುಂಬೈ : ಭಾರತದ ವೈಮನಸ್ಯದ ನಡುವೆಯೂ ತನ್ನ ಉದ್ದಟತನವನ್ನು ಮುಂದುವರೆಸಿರುವ ಮಾಲ್ಡಿವ್ಸ್ ಮಾ. 15 ಕ್ಕೂ ಮುನ್ನ ಭಾರತದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿದೆ. ಮಾಲ್ಡೀವ್ಸ್ ಉಪಾಧ್ಯಕ್ಷ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಶುರುವಾದ ಭಾರತೀಯರ ಮಾಲ್ಡೀವ್ಸ್ ದ್ವೇಷ ಈಗ ಇನ್ನೊಂದು ಹಂತ ತಲುಪಿದೆ. ಸಿನಿಮಾ ಚಿತ್ರೀಕರಣಕ್ಕೆ ಪ್ರಸಿದ್ದವಾಗಿರುವ ಮಾಲ್ಡಿವ್ಸ್ ನಲ್ಲಿ ಚಿತ್ರೀಕರಣ ನಡೆಸದಿರಲು ಭಾರತೀಯ ಸಿನಿಮಾರಂಗ ನಿರ್ಧರಿಸಿದೆ.
ಆಲ್ ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್ (AICWA) ಈ ಕುರಿತು ಅಧಿಕೃತ ಹೇಳಿಕೆ ಹೊರಬಿಟ್ಟಿದೆ.ಈ ಕುರಿತು ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿಕೊಂಡಿರುವ ಎಐಸಿಡಬ್ಲ್ಯುಎ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಮಾಲ್ಡೀವ್ಸ್ ಬದಲಾಗಿ ಭಾರತದ ದ್ವೀಪಗಳನ್ನು ಪ್ರಸಿದ್ದಗೊಳಿಸುವಂತೆ ಹೇಳಿದ್ದಾರೆ.